ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲ್ಲೂಕಿನ ಹೆಲಿಪ್ಯಾಡ್ ಹತ್ತಿರದ ಅಕೇಶಿಯಾ ಪ್ಲಾಂಟೇಶನ್‌ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತಪಟ್ಟ ಯುವಕ ಅಣ್ಣಪ್ಪ (33) ಎಂದು ಗುರುತಿಸಲಾಗಿದ್ದು, ಶಿರೂರು-ಆಲಳ್ಳಿ ವಾಸಿಯಾಗಿದ್ದಾನೆ. ಮೋಟರ್ ರಿಪೇರಿ ಕೆಲಸ ಮಾಡುತ್ತಿದ್ದ ಮೃತ ಅಣ್ಣಪ್ಪ, ಶಿರೂರು-ಆಲಳ್ಳಿ ಭಾಗದ ಬಿಜೆಪಿ ಬೂತ್ ಘಟಕದ ಅಧ್ಯಕ್ಷರಾಗಿದ್ದರು.

ಈ ಸಂಬಂಧ ಅಣ್ಣಪ್ಪ ಅವರ ಸಹೋದರ ರಾಘವೇಂದ್ರ ಅವರು ತಮ್ಮನನ್ನು ಯಾರೋ ಚೀಟಿ ಹಣದ ವಿಚಾರದಲ್ಲೋ, ಸಾಲದ ವಿಚಾರದಲ್ಲೋ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲೊ ಕೊಲೆ ಮಾಡಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Also read: ಶಿವಮೊಗ್ಗದಲ್ಲಿ ಪುನೀತ್ ಜನ್ಮದಿನಕ್ಕೆ ಸಿದ್ಧತೆ, ನಗರದಲ್ಲಿ ಅಪ್ಪು ಸಿನಿ ಜರ್ನಿ ನೆನಪುಗಳ ಕಟೌಟ್‌ಗಳು
ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ವಿಕ್ರಮ್ ಅಮಾತೆ, ಸಾಗರ ಎಎಸ್‌ಪಿ ರೋಹನ್ ಜಗದೀಶ್, ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಗಿರೀಶ್, ಪಿಎಸ್‌ಐ ಸುಜಾತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶಿವಮೊಗ್ಗದಿಂದ ಶ್ವಾನದಳ ಮತ್ತು ಬೆರಳಚ್ಚು ತಂಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post