ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲೂಕಿನ ಹೊಸಂತೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ #Keladishivappanayaka University ಶಿವಮೊಗ್ಗ ಇರುವಕ್ಕಿಯ ಅಂತಿಮ ವರ್ಷದ ಬಿ ಎಸ್ಸಿ ಅರಣ್ಯ ವಿದ್ಯಾರ್ಥಿಗಳು ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆ ಹೊಸಂತೆ ಆವರಣದಲ್ಲಿ ಬೆಳಗ್ಗೆ ಸಸಿ ನೆಟ್ಟು ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲೆ ಮುಖ್ಯ ಶಿಕ್ಷಕರಾದ ಗಣಪತಿ .ಕೆ ಮತ್ತು ಡಾ. ಸಿದ್ದಪ್ಪ ಕಣ್ಣೂರ್ ಸಹಾಯಕ ಪ್ರಾಧ್ಯಾಪಕರು ಅರಣ್ಯಶಾಸ್ತ್ರ ವಿಭಾಗ ಹಾಗೂ ಡಾ ಸುಜಾತ ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅರಣ್ಯ ವಿದ್ಯಾರ್ಥಿಗಳ ಗ್ರಾಮೀಣ ಅರಣ್ಯ ಕಾರ್ಯಾನುಭವ ಕಾರ್ಯಕ್ರಮದ ಅಂತಿಮ ದಿನವಾಗಿದ್ದು, ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹೂಸಂತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸುಜಾತ ಲೋಕೇಶ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ಹಿರೇ ಬೆಲಗುಂಜಿ,ಗಣಪತಿ. ಕೆ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಂತೆ, ಸ್ವಾಮಿನಾಥ್ SDMC ಅಧ್ಯಕ್ಷರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಂತೆ, ಹಾಗೂ ಡಾ ಸೂರಜ್ ಆರ್ ಹೊಸೂರ್, ಮಿಸ್ ನಯನ ಎಂ ಡಿ, ಮಿಸ್ ಹರ್ಷಲ್ ಸಾರೆಸ್, ಸಹಾಯಕ ಪ್ರಾಧ್ಯಾಪಕರು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಇವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಾಂಸ್ಕೃತಿಕ ನೃತ್ಯ ಹಾಗೂ ಹಾಡು, ನಾಟಕ ಮುಂತಾದ ಮನೋರಂಜನೆ ಕಾರ್ಯಕ್ರಮವನ್ನು ಮಾಡಿದರು. ಅರಣ್ಯ ವಿದ್ಯಾರ್ಥಿಗಳ ಗ್ರಾಮೀಣ ಅರಣ್ಯ ಕಾರ್ಯನುಭವ ಕಾರ್ಯಕ್ರಮ ಶಿಬಿರಕ್ಕೆ 15 ದಿನಗಳ ಕಾಲ ಪ್ರೋತ್ಸಾಹ ಹಾಗೂ ಸಹಕಾರ ಮಾಡಿಕೊಟ್ಟ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಗ್ರಾಮ ಪಂಚಾಯಿತಿ ಹಿರೇಬೇಲಗುಂಜಿ ಹಾಗು ಊರಿನ ಗ್ರಾಮಸ್ಥರಿಗೆ ಹೃದಯಪೂರ್ವಕ ಧನ್ಯವಾದವನ್ನು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















