ಕಲ್ಪ ಮೀಡಿಯಾ ಹೌಸ್ | ಸಾಗರ |
ಹೆಲ್ಮೆಟ್ #Helmet ಧರಿಸಿ, ಜೀವ ಉಳಿಸಿ ಎಂಬ ಧ್ಯೇಯ ವಾಕ್ಯಗೊಂದಿಗೆ ತಾಲೂಕಿನ ಆನಂದಪುರಂನಲ್ಲಿ ಪೊಲೀಸ್ ಇಲಾಖೆಯಿಂದ #Police Department ಬೈಕ್ ರ‍್ಯಾಲಿ #Bike Rally ನಡೆಸಲಾಯಿತು.
ಸಾಗರ ಉಪವಿಭಾಗ ಎಎಸ್’ಪಿ ಬೆನಕ ಪ್ರಸಾದ್ ಅವರ ನೇತೃತ್ವದಲ್ಲಿ ಆನಂದಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸಿ, ಜೀವ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಎಎಸ್’ಪಿ ಬೆನಕ ಪ್ರಸಾದ್ ಅವರು ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿದರು.
ಯಡೆಹಳ್ಳಿ ವೃತ್ತದಿಂದ ಬೈಕ್ ರ‍್ಯಾಲಿಯನ್ನು ಪ್ರಾರಂಭಿಸಿ ಆನಂದಪುರ ಪೊಲೀಸ್ ಠಾಣೆಗೆ ತಲುಪಿ ನಂತರ ಆನಂದಪುರ ಬಸ್ ನಿಲ್ದಾಣಕ್ಕೆ ಬಂದು ಬೈಕ್ ರ‍್ಯಾಲಿ ಸಂಪನ್ನಗೊಂಡಿತು.
ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬೆನಕ ಪ್ರಸಾದ್ ಅವರು, ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಅನ್ನು ಧರಿಸುವುದರ ಉದ್ದೇಶ, ಪ್ರಾಮುಖ್ಯತೆ ಹಾಗೂ ಅದರ ಮೌಲ್ಯದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಹೆಲ್ಮೆಟ್ ಒಂದು ಜೀವ ರಕ್ಷಕ ಸಾಧನವಾಗಿದ್ದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರಿಂದ, ಅಪಘಾತಗಳು ಸಂಭವಿಸಿದಾಗ ಆಗಬಹುದಾದಂತಹ ಮಾರಣಾಂತಿಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿರುತ್ತದೆ ಎಂದು ತಿಳಿಸಿಕೊಟ್ಟರು.
ಆನಂದಪುರಂ ಪೊಲೀಸ್ ಉಪನಿರೀಕ್ಷಕ ಪ್ರವೀಣ್, ಆನಂದಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post