ಕಲ್ಪ ಮೀಡಿಯಾ ಹೌಸ್
ಸಾಗರ: ತಾಲ್ಲೂಕಿನ ಹಲವು ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರ್ಚುವಲ್ ಮುಖಾಂತರ ಜುಲೈ 24ರ ಬೆಳಿಗ್ಗೆ 10ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು.
ಅವರು ಇಲ್ಲಿನ ಗಾಂಧಿ ಮಂದಿರದ ಸಾಂಸ್ಕೃತಿಕ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯ ಉದ್ಘಾಟನಾ ಕಾರ್ಯಕ್ರಮ 155-00 ಕೋಟಿ ರೂ., ಜೋಗ ಅಭಿವೃದ್ಧಿ ಕಾಮಗಾರಿ 165 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206 (69) ತುಮಕೂರು ಹೊನ್ನಾವರ ರಸ್ತೆಯ ಕಿ.ಮೀ. 278 ರಿಂದ 286.40ರವರೆಗೆ ಸಾಗರ ನಗರ ವ್ಯಾಪ್ತಿಯಲ್ಲಿ 4ಪಥದ ರಸ್ತೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ, 77.19ಕೋಟಿ ಕಾಮಗಾರಿ, ಶಿವಮೊಗ್ಗ ಜಿಲ್ಲೆಯ ಸಾಗರ ನಗರ ವ್ಯಾಪ್ತಿಯ ಹಾವೇರಿ-ಸಾಗರ (ರಾಜ್ಯ ಹೆದ್ದಾರಿ-62) ರಸ್ತೆ, ಸರಪಳಿ 108.95 km ರಿಂದ 109kmವರೆಗಿನ ರಸ್ತೆಯ ಭೂಸ್ವಾದೀನ ಮತ್ತು ಅಗಲೀಕರಣ ಕಾಮಗಾರಿಗೆ ಚಾಲನೆ, 60-00 ಕೋಟಿ ರೂ.ಗಳ ಕಾಮಗಾರಿ,
ಸಾಗರ ತಾಲ್ಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಸಮುದಾಯ ಭವನ ಶಂಕುಸ್ಥಾಪನೆ 1.50ಕೋಟಿ ರೂಪಾಯಿಗಳು,
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಗರಸಭೆಯ ಗಾಂಧಿಮೈದಾನದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾರ್ವಜನಿಕ ಸಭಾಭವನ ನಿರ್ಮಾಣ ಕಾಮಗಾರಿ 50ಲಕ್ಷ ರೂ.ಗಳ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಗೋಷ್ಟಿಯಲ್ಲಿ ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷರಾದ ವಿ. ಮಹೇಶ್, ಸದಸ್ಯರಾದ ಟಿ.ಡಿ. ಮೇಘರಾಜ್, ಗಣೇಶ್ ಪ್ರಸಾದ್, ಲಿಂಗರಾಜ್, ಸಂತೋಷ್ ಶೇಟ್, ಶ್ರೀರಾಮ, ಪ್ರೇಮಾ ಕಿರಣ್ ಸಿಂಗ್, ಬಿ.ಟಿ.ರವೀಂದ್ರ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post