ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲೂಕಿನ ಸುಳ್ಳೂರು ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 150ಲೀ ಬೆಲ್ಲದಕೊಳೆಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ಸಾಗರ ವಲಯ ಅಬಕಾರಿ ನಿರೀಕ್ಷಕ ಎಲ್.ಸಿ. ಸಂದೀಪ್, ಉಪನಿರೀಕ್ಷ ಸಂತೋಷ್, ಕಾನ್‌ಸ್ಟೆಬಲ್‌ಗಳಾದ ಮಹಾಬಲೇಶ್, ಗುರುಮೂರ್ತಿ, ಮುದಾಸಿರ್, ಕನ್ನಯ್ಯ ಬಸವರಾಜ್ ಹಾಗೂ ವಾಹನ ಚಾಲಕರಾದ ಗಣಪತಿ ಇವರನ್ನೊಳಗೊಂಡ ತಂಡ ಸುಳ್ಳೂರು ಗ್ರಾಮದ ಲಕ್ಷ್ಮಣ ಬಿನ್ ಬಸಪ್ಪ ಇವರ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿಟಟಿದ್ದ ೧೫೦ ಲೀ. (ಕಳ್ಳಬಟ್ಟಿ ಸಾರಾಯಿ ತಯಾರಿಕೆಗಾಗಿ ಸಂಗ್ರಹಿಸಿದ್ದ) ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡು, ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post