ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲ್ಲೂಕಿನ ಯಡಜಿಗಳ ಮನೆ ಪಂಚಾಯ್ತಿ ವ್ಯಾಪ್ತಿಯ ಕೆಸವಿನ ಮನೆ ಸಮೀಪದ ಶರಾವತಿ ಹಿನ್ನೀರಿನ ದಡದಲ್ಲಿ ದೊಡ್ಡ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಯಾರೋ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಜು ಮಾಡುತ್ತಿದ್ದವರಿಗೆ ತಿಳುವಳಿಕೆಯ ಪಾಠ ಹೇಳಿದ್ದಾರೆ.
ಶರಾವತಿ ಹಿನ್ನೀರು ಎನ್ನುವುದು ಹಲವರಿಗೆ ಮೋಜ ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆಲ್ಲಾ ಯಾರು ಅನುಮತಿ ನೀಡುತ್ತಾರೆ ಅನ್ನೋದು ಸ್ಥಳೀಯ ಪ್ರಶ್ನೆಯಾಗಿದೆ.
ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಯಾರಾದರೂ ವಾಹನ ನಿಲ್ಲಿಸಿದರೂ ಪ್ರಶ್ನೆ ಮಾಡುತ್ತದೆ. ಹಾಗಿದ್ದಾಗ ರಸ್ತೆ ಬದೀಲಿ ಸಿಗುವ ಕಾಡಿನ ಸ್ಥಳದಲ್ಲಿ ಎಣ್ಣೆ ಬಾಟಲಿಗಳು ಎಲ್ಲಿಂದ ಬರುತ್ತವೆ. ಎನ್ನುವುದನ್ನು ಯಾರಿಗೆ ಕೇಳಬೇಕು! ಇನ್ನು ಶರಾವತಿ ಹಿನ್ನೀರನ್ನು ರೆಸಾರ್ಟ್, ಬ್ಯುಸಿನೆಸ್‌ಗೆ ಬಳಸಿಕೊಳ್ಳುತ್ತಿರುವವರು ಸಹ ಕಸವನ್ನು ಕ್ಲೀನ್ ಮಾಡದೆ, ಮೋಜಿನ ಪಾರ್ಟಿಗಳಿಗೆ ಖುದ್ದು ಅನುವು ಮಾಡಿಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನೂ ಇವತ್ತಿನ ಪಾರ್ಟಿ ಕೇವಲ ಒಂದು ಉದಾಹರಣೆಯಷ್ಟೆ, ಶರಾವತಿ ಹಿನ್ನೀರು ಪ್ರಕೃತಿ ಮಡಿಲಷ್ಟೆ ಅದನ್ನ ಮೋಜಿಗೆ ಬಳಸದಿರಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post