ಕಲ್ಪ ಮೀಡಿಯಾ ಹೌಸ್
ಸಾಗರ: ಕೊರೋನಾ ಸಂಕಷ್ಟದಿಂದ ಇಡೀ ದೇಶವೇ ತತ್ತರಿಸಿದ್ದು ಗ್ರಾಮೀಣ ಭಾಗದ ಬಡಜನರು ಜೀವಿಸುವುದೇ ಕಷ್ಟವಾಗಿದೆ. ಹಸಿವಿನಿಂದ ಅದೆಷ್ಟೋ ಜೀವರಾಶಿಗಳು ತತ್ತರಿಸುತ್ತಿವೆ ಇಂತಹ ಸಂದರ್ಭದಲ್ಲಿ ಬಡ ಜನರಿಗೆ ಪ್ರತಿನಿತ್ಯ ಅವರ ಮನೆ ಬಾಗಿಲಿಗೆ ಹಾಲು ಸರಬರಾಜವಾಗುವಂತೆ ಹಾಲು ಅಭಿಯಾನ ಆರಂಭಿಸಿದ ಕೊಡುಗೈ ದಾನಿ ಉದ್ಯಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು.
ಸಾಗರ ತಾಲೂಕಿನ ಆನಂದಪುರದಲ್ಲಿ ಉದ್ಯಮಿಯೊಬ್ಬರು ಬಡ ಜನರ ಕಷ್ಟಕ್ಕೆ ನೆರವಾಗಿದ್ದಾರೆ ಅವರು ಆರಂಭಿಸಿದ ಹಾಲು ಅಭಿಯಾನದಿಂದ ಆನಂದಪುರದ ಬಡ ಕುಟುಂಬದ ಪ್ರತಿ ಮನೆಗೆ ಹಾಲನ್ನು ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಿ ಬಡ ಜನರು ಯಾರೂ ಕೂಡ ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಹಾಲು ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ.
ಸ್ವಂತ ವೆಚ್ಚದಲ್ಲಿ ಪ್ರತಿದಿನ ಸಾವಿರಾರು ಕುಟುಂಬಕ್ಕೆ ಇವರು ಹಾಲಿನ ಪ್ಯಾಕೆಟ್ ಅನ್ನು ನೀಡುವಂತೆ ವ್ಯವಸ್ಥೆಯನ್ನು ಮಾಡಿದ್ದಾರೆ.ಪ್ರತಿದಿನ 600 ರಿಂದ 700 ಲೀಟರ್ ಹಾಲನ್ನು ಹಂಚುವಂತೆ ಅವರು ಸೂಚನೆ ಕೂಡ ನೀಡಿದ್ದು ನಿಸ್ವಾರ್ಥತೆಯಿಂದ ಹಾಲನ್ನು ಹಂಚಲಾಗುತ್ತಿದ್ದು, ಕೊರೊನಾ ಸಂದರ್ಭದಲ್ಲಿ ಜನ ಮಾನವೀಯತೆ ಮರೆಯುತ್ತಿದ್ದರೂ ಕೂಡ ಕೆಲವೊಂದು ಸಂದರ್ಭದಲ್ಲಿ ಇಂತಹ ದಾನಿಗಳು ಬಡ ಜನರ ಕಷ್ಟಕ್ಕೆ ನೆರವಾಗುತ್ತಿರುವುದು ನಿಜಕ್ಕೂ ವಿಶೇಷವಾಗಿದೆ.
ವರದಿ: ಪವನ್ ಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post