ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ-ಸಿಗಂದೂರು ರಸ್ತೆಯ ಖಾಸಗಿ ಲೇ ಔಟ್‌ನಲ್ಲಿ ಅಪರೂಪದ ತಳಿಯ ಕಾಡುಪಾಪ ಶನಿವಾರ ಕಾಣಿಸಿಕೊಂಡಿದೆ.
ಲೇ ಔಟ್‌ನ ಬೇಲಿಯ ನಡುವೆ ಕಾಣಿಸಿಕೊಂಡ ಈ ಕಾಡುಪಾಪವನ್ನು ಇಂಗ್ಲಿಷ್‌ನಲ್ಲಿ ಸ್ಲೆಂಡರ್ ಲೋರಿಸ್ (Slender Loris) ಎಂದು ಕರೆಯುತ್ತಾರೆ. ನಿಧಾನವಾಗಿ ಸಾಗುವ, ಓಡಲು, ಹಾರಲು ಬಾರದ ಸೌಮ್ಯ ಸ್ವಭಾವದ ಪ್ರಾಣಿ ಎಂದು ಗುರುತಿಸಲಾಗಿದೆ.
ಸ್ಥಳೀಯರು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿಯವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಖಿಲೇಶ್ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಸಮೀಪದ ಕಾಡಿಗೆ ಅದನ್ನು ಬಿಡುವ ವ್ಯವಸ್ಥೆ ಮಾಡಿದರು.
Also read: ಸೆ.26ರಿಂದ ಭದ್ರಾವತಿ ಆಕಾಶವಾಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಉಪನ್ಯಾಸಗಳ ಮಾಲಿಕೆ
ಈ ತಳಿಯ ಕಾಡುಪಾಪ ರಾತ್ರಿ ವೇಳೆ ಮಿಡತೆ, ಚಿಟ್ಟೆಗಳನ್ನು ತಿಂದು ಬದುಕುತ್ತದೆ. ಹಗಲಿನಲ್ಲಿ ಇದಕ್ಕೆ ಕಣ್ಣು ಕಾಣಿಸುವುದಿಲ್ಲ. ದಟ್ಟ ಕಾಡಿನಲ್ಲಿ ವಾಸಿಸುವ ಈ ಪ್ರಾಣಿ ಪೇಟೆಯ ಸಮೀಪ ಬಂದಿರುವುದು ಆಶ್ಚರ್ಯ ತಂದಿದೆ ಎಂದು ಅಖಿಲೇಶ್ ಚಿಪ್ಪಳಿ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post