ಕಲ್ಪ ಮೀಡಿಯಾ ಹೌಸ್
ಸಾಗರ: ಹೊಸನಗರ ಮತ್ತು ಸಾಗರ ತಾಲ್ಲೂಕಿನಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕರಿಗೆ ಅಗತ್ಯ ಆಹಾರ ವಸ್ತುಗಳು ಮತ್ತು ಕೃಷಿಗೆ ಸಂಬಂಧಿಸಿದ ಪರಿಕರಗಳ ಕೊರತೆ ನೀಗಿಸಲು ಶಾಸಕ ಹೆಚ್. ಹಾಲಪ್ಪ ತಾಲ್ಲೂಕು ಕೋವಿಡ್ ಟಾಸ್ಕ್ ಫೋರ್ಸ್‌ನೊಂದಿಗೆ ಸಮಾಲೋಚಿಸಿ, ಪ್ರತಿನಿತ್ಯ ಬೆಳಿಗ್ಗೆ 6ರಿಂದ 8ರವರೆಗೂ ಅಗತ್ಯ ಆಹಾರ ವಸ್ತುಗಳ ಖರೀದಿಗೆ ಹಾಗೂ 6ರಿಂದ 10ಗಂಟೆಯವರೆಗೆ ರೈತರಿಗೆ ಅತ್ಯಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ಖರೀದಿಸಲು ಹಾಗೂ ಕೃಷಿ ಉಪಕರಣಗಳ ರಿಪೇರಿ ಸಂಬಂಧಪಟ್ಟ ಗ್ಯಾರೇಜ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಸೂಚನೆ:
ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲದೆ, ಕಡ್ಡಾಯವಾಗಿ ಕೊರೋನ ನಿಯಮ ಪಾಲಿಸಿಕೊಂಡು ವ್ಯವಹರಿಸತಕ್ಕದ್ದು ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post