ಕಲ್ಪ ಮೀಡಿಯಾ ಹೌಸ್ | ಸಾಗರ |
ಕೆಳದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾಗರ-ಕೆಳದಿ ಮುಖ್ಯರಸ್ತೆಯ ಕೃಷ್ಣ ದೇವಸ್ಥಾನದ ಚಿಲುಮೆಕಟ್ಟೆಯಿಂದ ಮೇಲಿನ ಕೇರಿ ಮುಖಾಂತರ ಹಾಲಿನ ಡೈರಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್. ಹಾಲಪ್ಪ ಅವರು ಭೂಮಿ ಪೂಜೆ ನೆರವೇರಿಸಿದರು.
30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಕಾಮಗಾರಿಗೆ ಇಂದು ನಡೆದ ಕಾರ್ಯಕ್ರಮದಲ್ಲಿ ಶಾಸಕರು ಚಾಲನೆ ನೀಡಿದರು.
10 ಲಕ್ಷ ರೂ. ವೆಚ್ಚದಲ್ಲಿ ಮಾಸೂರು ಗ್ರಾಪಂ, ಮಾಸೂರು ಗ್ರಾಮದ ಗೌಡರ ಕೇರಿ ರಸ್ತೆ, 20 ಲಕ್ಷ ರೂ. ವೆಚ್ಚದಲ್ಲಿ ಮೇಳವರಿಗೆ ಬ್ರಾಹ್ಮಣ ಕೇರಿಯಿಂದ ಅಚಾರ್ ಮನೆಯವರೆಗೆ, 30 ಲಕ್ಷ ರೂ. ವೆಚ್ಚದಲ್ಲಿ ಕೆಳದಿ ಗ್ರಾಪಂ ಮಗೆಕೊಪ್ಪದಿಂದ ಬಿಳೆಕಲ್ಲಿಗೆ ಹೋಗುವ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಅದರಂತೆ ಗ್ರಾಮದ ಕನ್ನಪ್ಪ ನವರ ಮನೆಯಿಂದ ಕಾನ್ಲೆ ಮರಿಯಪ್ಪನವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, 55 ಲಕ್ಷ ರೂ. ವೆಚ್ಚದಲ್ಲಿ ಮಾಸೂರು-ಅದರಂತೆ-ಪಡವಗೋಡು-ತಾಳುಗುಪ್ಪ ಸಂಪರ್ಕ ರಸ್ತೆಯ ಆಯ್ದ ಭಾಗಗಳಲ್ಲಿ (ಅದರಂತೆ ಊರೊಳಗೆ) ಮರು ಡಾಂಬರೀಕರಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
15 ಲಕ್ಷ ರೂ. ವೆಚ್ಚದಲ್ಲಿ ತಲವಾಟ ಗ್ರಾಮ ಪಂಚಾಯ್ತಿ ಘಮಟೆಗಟ್ಟ ಬ್ರಾಹ್ಮಣಕೇರಿ ರಸ್ತೆ ಅಭಿವೃದ್ಧಿ, 40 ಲಕ್ಷ ರೂ. ವೆಚ್ಚದಲ್ಲಿ ಇಡುವಾಣಿ ಹೊನಗೋಡು ಮಾರ್ಗದ ಕಾನುಗೋಡು ಹೋಗುವ ರಸ್ತೆ ಅಭಿವೃದ್ಧಿ, 40 ಲಕ್ಷ ರೂ. ವೆಚ್ಚದಲ್ಲಿ ಹುಲ್ಲಿನಕೈಯಿಂದ ಪಡಗೇರಿ ರಸ್ತೆ ಅಭಿವೃದ್ಧಿ, 35 ಲಕ್ಷ ರೂ. ವೆಚ್ಚದಲ್ಲಿ ಕೆಳಗಿನ ಹೊನಗೋಡು-ಕಾನುತೋಟ ಸಂಪರ್ಕ ರಸ್ತೆಯ ಕೊರಕೋಡು ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಮಾಸೂರು ಗ್ರಾಪಂ, ಮೆಳವರಿಗೆ ಗ್ರಾಮದ ಅಂಗನವಾಡಿ ಉದ್ಘಾಟಿಸಿ, ಮಕ್ಕಳಿಗೆ ಸಿಹಿ ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇನ್ನು, ಬಂದಗದ್ದೆ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ನಂತರ ಮಕ್ಕಳಿಗೆ ಸಿಹಿ ವಿತರಿಸಿದರು. ಬಿಇಒ, ಚುನಾಯಿತ ಪ್ರತಿನಿಧಿಗಳು, ಶಿಕ್ಷಕರು, ಎಸ್’ಡಿಎಂಸಿ ಸಮಿತಿಯವರು, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಆನಂತರ, ಬಿಜೆಪಿ ಕಾರ್ಯಕರ್ತರಾದ ಹಾರೋಗೊಪ್ಪ ಹರೀಶ್ ಅವರ ತಾಯಿ ಇತ್ತೀಚೆಗೆ ಮೃತಪಟ್ಟಿದ್ದು, ಮೃತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















