ಕಲ್ಪ ಮೀಡಿಯಾ ಹೌಸ್
ಸಾಗರ: ಶಾಸಕ ಹೆಚ್.ಹಾಲಪ್ಪ ಬೆಂಗಳೂರಿನಲ್ಲಿ ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಹೊಸನಗರ ತಾ. ಬಾಳೂರು ಗ್ರಾ.ಪಂ ವ್ಯಾಪ್ತಿಯ ಹಾವಾಡಿಗರ ಕೇರಿಯ ರಸ್ತೆ ಅಭಿವೃದ್ಧಿಗೆ 150 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಸಾಗರದ ಜಂಬಗಾರುವಿನ 5 ಎಕರೆ ಪ್ರದೇಶದಲ್ಲಿ 4 ವಿದ್ಯಾರ್ಥಿನಿ ನಿಲಯಗಳಿದ್ದು. ಸದರಿ ವಿದ್ಯಾರ್ಥಿನಿ ನಿಲಯಗಳಿಗೆ ಕಾಂಪೌಂಡ್ ನಿರ್ಮಿಸಲು 200 ಲಕ್ಷ ಅನುದಾನ ಮಂಜೂರು ಮಾಡುವ ಕುರಿತು ಚರ್ಚಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















