ಸಾಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಸೂರನಗದ್ದೆ ನಿವಾಸಿಗಳಾದ ರಮೇಶ್(29), ಸಂದೀಪ್(22) ಎನ್ನಲಾಗಿದೆ. ನಗರದ ಅಣಲೇಕೊಪ್ಪದ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್’ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಸಾಗರ ನಗರದ ಹಲವು ಕಡೆಗಳಲ್ಲಿ ಮಾಂಗಲ್ಯ ಸರ ಅಪಹರಿಸಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಇದಲ್ಲದೆ ಸಿದ್ದಾಪುರ ತಾಲ್ಲೂಕಿನಲ್ಲಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಸುಮಾರು 10 ಲಕ್ಷ ರೂ. ಮೌಲ್ಯದ 320 ಗ್ರಾಂ ತೂಕದ ಎಂಟು ಮಾಂಗಲ್ಯ ಸರ ಹಾಗೂ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ. ಇವರ ಬಂಧನದೊಂದಿಗೆ ಎಂಟು ಮಾಂಗಲ್ಯ ಸರ ಅಪಹರಣ ಪ್ರಕರಣ ಬೇಧಿಸಿದಂತಾಗಿದೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಹಾಯಕ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣೆ ಸರ್ಕಲ್ ಇನ್’ಸ್ಪೆಕ್ಟರ್ ಎಸ್. ಮಹಾಬಲೇಶ್ವರ್, ಸಿಬ್ಬಂದಿಗಳಾದ ರತ್ನಾಕರ್, ಹಜರತ್ ಅಲಿ, ಜಯೇಂದ್ರ, ಕಾಳಾನಾಯ್ಕ್, ದಿವಾಕರ್, ಶ್ರೀಧರ ಮತ್ತು ಜಯಂತ್ ಪಾಲ್ಗೊಂಡಿದ್ದರು.
Discussion about this post