ಕಲ್ಪ ಮೀಡಿಯಾ ಹೌಸ್
ಸಾಗರ: ಕೊರೋನಾ ಸಂಕಷ್ಟದಲ್ಲಿ ಸಾಮಾನ್ಯ ಜನರು ಒಂದೊಂದು ರೂಪಾಯಿಗೂ ಕಷ್ಟಪಡುವಂಥ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಸರ್ಕಾರ ದಿನೇ ದಿನೇ ಪೆಟ್ರೋಲ್, ಡೀಸೆಲ್ ಮತ್ತು ಇಂಧನಗಳ ಬೆಲೆ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುತ್ತಿದೆ. ಮೋದಿಯವರದು ಅವಿವೇಕಿ ಸರ್ಕಾರ ಎಂದು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಪೆಟ್ರೋಲ್-ಡೀಸೆಲ್ ದರದ ಏರಿಕೆಯ ವಿರುದ್ಧ ತಾಲ್ಲೂಕಿನ ಆನಂದಪುರದ ಯಡೇಹಳ್ಳಿ ಪೆಟ್ರೋಲ್ ಬಂಕ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮಾತನಾಡಿ, ಇದು ಮೋದಿಯವರ ಸುಲಿಗೆಯ ಪರಮಾವಧಿ ಇವರ ಕಾಲದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟವಾಗಿದೆ ಅವರ ಆಡಳಿತ ಸಾಮಾನ್ಯ ಜನರಿಗೆ ತೃಪ್ತಿ ನೀಡಿಲ್ಲ ಎಂದು ಹೇಳಿದರು.
ರತ್ನಾಕರ ಹೊನಗೋಡು ಮಾತನಾಡಿ, ಪ್ರಧಾನಿ ಮೋದಿಯವರ ಅವಿವೇಕಿ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲೇಬೇಕೆಂದು ಆಗ್ರಹಿಸಿದರು.
ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಪೆಟ್ರೋಲ್ ಡೀಸೆಲ್ ದರ ಇಳಿಸಲೇಬೇಕೆಂದು ಪಾಲ್ಗೊಂಡು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪೆಟ್ರೋಲ್ ಬಂಕ್ ಮುಂಭಾಗ ಮೋದಿಯವರ ಹುಲ್ಲಿನ ಪ್ರತಿಮೆಯನ್ನು ಮಾಡಿ ಪೆಟ್ರೋಲ್ ಸುರಿದು ಸುಡುವ ಮೂಲಕ ಆಕ್ರೋಶ ಹೊರಹಾಕಿದರು.
ವರದಿ : ಪವನ್ ಕುಮಾರ್ ಕಟಾರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post