ಕಲ್ಪ ಮೀಡಿಯಾ ಹೌಸ್
ಸಾಗರ: ಛಾಯಾಗ್ರಹಣವನ್ನು ಕಲಾತ್ಮಕವಾಗಿ ಪೋಷಿಸುವ ಉದ್ದೇಶದಿಂದ 35ವರ್ಷದೊಳಗಿನ ಯುವ ಛಾಯಾಗ್ರಾಹಕರಿಗೆ ನಡೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ನೀಡುವ ಅಸ್ಕರಿ ಪ್ರಶಸ್ತಿಯು ತಾಲ್ಲೂಕಿನ ಕೊಡ್ಲತೋಟದ ಈಶಾನ್ಯ ಶರ್ಮಾ ಅವರಿಗೆ ದೊರೆತಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈಶಾನ್ಯ ಶರ್ಮಾ ಆಯುರ್ವೇದ ಪಂಡಿತರಾದ ರಮೇಶ್ ಕೊಡ್ಲುತೋಟ ಮತ್ತು ಸರಸ್ವತಿಯವರ ಪುತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಛಾಯಾಗ್ರಾಹಕ ಎಂ.ಎ. ಆಸಿಫ್ ನೇತೃತ್ವದಲ್ಲಿ ಸ್ಥಾಪಿಸಿರುವ ಸಂಸ್ಥೆ ನಡೆಸುವ ಈ ಸ್ಪರ್ಧೆಯಲ್ಲಿ ಈಶಾನ್ಯ ಶರ್ಮಾ ಈ ಸಾಧನೆ ಮಾಡಿದ್ದಾರೆ.
21 ವರ್ಷ ವಯಸ್ಸಿನ ಇವರು ಕೆಲವು ವರ್ಷಗಳಿಂದ ಛಾಯಾಚಿತ್ರ ಗ್ರಹಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಗಸ್ಟ್ 21 ರಂದು ನಡೆದ ವಿಶ್ವ ಛಾಯಾಗ್ರಹಣ ದಿನದಂದು ವೈ.ಪಿ.ಎಸ್. ಆಯೋಜಿಸಿದ್ದ ಅಖಿಲ ಭಾರತ ಸಲಾನ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ, ಸ್ಮರಣಿಕೆ ಹಾಗೂ ನಗದು ಬಹುಮಾನ 5000ರೂ. ಸ್ವೀಕರಿಸಿದರು.
ಸಾಗರ ಫೋಟೋ ಗ್ರಾಫಿಕ್ ಸೊಸೈಟಿಯ ಸದಸ್ಯರೂ ಆಗಿರುವ ಈಶಾನ್ಯ ಶರ್ಮಾ ಅವರ ಸಹೋದರ ಕೌಂಡಿಣ್ಯ ಶರ್ಮಾ ಸಾಹಿತ್ಯ ಮತ್ತು ಕಿರುತೆರೆ, ಸಂಗೀತದಲ್ಲಿ ವಿಶಿಷ್ಠ ಸಾಧನೆ ಮಾಡುತ್ತಿದ್ದಾರೆ. ಈಶಾನ್ಯ ಶರ್ಮಾರಿಗೆ ಪ್ರಶಸ್ತಿಯನ್ನು ತಂದುಕೊಟ್ಟ ಛಾಯಾಚಿತ್ರಗಳು ಇಲ್ಲಿ ಕಾಣಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post