ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕಿನಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅತ್ಯಂತ ಶಿಸ್ತುಬದ್ಧವಾಗಿ ತರಕಾರಿ ಹೋಲ್ ಸೇಲ್ ವ್ಯಾಪಾರ ಮಾಡಲಾಯಿತು. ಪೊಲೀಸರ ಕಾವಲಿನಲ್ಲಿ 20 ವಾಹನಗಳಲ್ಲಿ ತರಕಾರಿ ವ್ಯಾಪಾರ ನಡೆಯಿತು.
ಇಂದು ಬೆಳಿಗ್ಗೆ 6 ರಿಂದ 10ರವರೆಗೆ ನಡೆದ ವಹಿವಾಟಿನಲ್ಲಿ ಚಿಲ್ಲರೆ ವ್ಯಾಪಾರಿಗಳು ತಾಜಾ ತರಕಾರಿ ಖರೀದಿಸಿದರು. ಸಾಗರದ ಜನತೆಯ ಸುರಕ್ಷತೆಗಾಗಿ ಕಠಿಣ ಕ್ರಮ ಕೈಗೊಂಡಿರುವ ಶಾಸಕ ಹೆಚ್ ಹಾಲಪ್ಪ, ಪೊಲೀಸ್ ಉಪ ಅಧೀಕ ವಿನಾಯಕ್ ಶೆಟಗೇರಿ, ಉಪವಿಭಾಗಾಧಿಕಾರಿ ಡಾ. ಎಲ್. ನಾಗರಾಜ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ, ಪೊಲೀಸ್ ಇನ್ಸಪೆಕ್ಟರ್ ಅಶೋಕ್ ಕುಮಾರ್ ಸೇರಿದಂತೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post