ಕಲ್ಪ ಮೀಡಿಯಾ ಹೌಸ್ | ಸಾಗರ |
ಗೋವು ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿ ತಾಲೂಕು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪಟ್ಟಣದ ಮಾರಿಕಾಂಬ ದೇವಸ್ಥಾನದ ಎದುರು ಗೋವು ಪೂಜೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಜಿಲ್ಲಾ ರಕ್ಷಣಾಧಿಕಾರಿಗಳು ಬರುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವ ತೀರ್ಮಾನವನ್ನು ವಿಹಿಂಪ ಮತ್ತು ಬಜರಂಗದಳ ತೆಗೆದುಕೊಂಡಿದ್ದು, ಬಿ.ಹೆಚ್.ರಸ್ತೆಯ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಮಾಡಲಾಗುವುದೆಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಆಡಳಿತ ಸರ್ಕಾರ, ಪೊಲೀಸ್ ಇಲಾಖೆ ಮತ್ತು ನಗರಸಭೆ ವಿರುದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಸಂತೋಷ್ ಶಿವಾಜಿ, ರಾಘು ಕಾಮತ್, ಕೃಷ್ಣಮೂರ್ತಿ, ಅ.ಪು. ನಾರಾಯಣಪ್ಪ, ಶ್ರೀಧರ್ ಸಾಗರ್, ಸುದರ್ಶನ್ ವಕೀಲರು, ಪ್ರತಿಮಾ ಜೋಗಿ, ಶೋಭಾ, ಆಶಾ ನಾಗರಾಜ್, ಕಿರಣ, ನಂದೀಶ, ರವೀಶ್, ಐ.ವಿ. ಹೆಗಡೆ. ವಿರೂಪಾಕ್ಷ ಗೌಡ. ಇನ್ನಿತರ ಪ್ರಮುಖರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post