ಕಲ್ಪ ಮೀಡಿಯಾ ಹೌಸ್
ಸಾಗರ: ಮಳೆಗಾಲದಲ್ಲಿ ಹತ್ಮೀನು ಹೊಡೆಯಲು ಅನೇಕ ಮಂದಿ ಹೊರಡುತ್ತಾರೆ. ಮಲೆನಾಡು ಭಾಗದಲ್ಲಿ ಅರ್ಜಿನ್ ಜಬ್ಬು ಮೀನಿನ ಪ್ರಭೇದವಿದೆ ಇದರ ವಿಶೇಷವೆಂದರೆ, ಶರಾವತಿ ನದಿಯಲ್ಲಿ ಹುಟ್ಟಿದ ಈ ಮೀನು ಎಂತದ್ದೇ ಪ್ರವಾಹವಿದ್ದರು, ಶರಾವತಿ ನದಿಯಿಂದ ವರದಾ ನದಿ ಮೂಲಕ ತುಂಗಭದ್ರಾ ನದಿಗೆ ಹೋಗಿ, ಅಲ್ಲಿಂದ ಮತ್ತೆ ತಾನು ಹುಟ್ಟಿದ ಜಾಗಕ್ಕೆ ಬಂದು ಮರಿ ಮಾಡುತ್ತೆ. ಇದು ಪ್ರಕೃತಿಯ ವೈಶಿಷ್ಟ್ಯತೆ ಎಂದು ಶಾಸಕ ಹಾಲಪ್ಪ ಮಲೆನಾಡಿ ವೈವಿಧ್ಯತೆಯ ಬಗ್ಗೆ ವರ್ಣಿಸಿದ್ದಾರೆ.
ಮುರ್ಗೊಡ್ ಮೀನು:
ಹೆಣ್ಣು ಮೀನು ಹಾಲು ಬಿಡುತ್ತಾ ಹೋಗುತ್ತೆ, ಗಂಡು ಮೀನು ತತ್ತಿ ಬಿಡುತ್ತಾ ಹೋಗುತ್ತೆ, ಇದೆ ಅದಕ್ಕೆ ಆಹಾರ. ಇದು ರಾತ್ರಿ ವೇಳೆಯಲ್ಲಿ ನೆಡೆಯುವ ಕ್ರಿಯೆ. ಮೊಟ್ಟೆ ಇಡುವಾಗ ಪ್ರಸವ ವೇದನೆಯಿಂದ ಮೈಮರೆತಿರುವ ಮೀನನ್ನು ನಮ್ ಜನ ಹೊಡೆದು ತರುತ್ತಾರೆ. ಶೇ. 10ರಷ್ಟು ಮರಿಗಳು ಮಾತ್ರ ಉಳಿಯುತ್ತವೆ ಈ ರೀತಿಯ ಮೀನಿನ ಸಂತತಿ ನಶಿಸದಂತೆ ಮಾಡಲು ಸರ್ಕಾರ ಜೂನ್- ಜುಲೈ ತಿಂಗಳಿನಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಿದೆ ಆದರೂ ಜನರು ಇದನ್ನು ಅರ್ಥ ಮಾಡಿಕೊಂಡಿಲ್ಲ.

ಗುಡುವಿ_ಪಕ್ಷಿಧಾಮ:
ಇಲ್ಲಿರುವ ವಿಶೇಷ ಪ್ರಭೇದದ ಪಕ್ಷಿಗಳು ಸೈಬೀರಿಯ ದೇಶಕ್ಕೆ ವಲಸೆ ಹೋಗುತ್ತವೆ. 10 ಸಾವಿರಕ್ಕೂ ಅಧಿಕ ಕಿ.ಮೀ ಹಗಲು ರಾತ್ರಿಯೆನ್ನದೆ ವಿಶ್ರಮಿಸದೆ ಕ್ರಮಿಸುತ್ತವೆ. ಇನ್ನೊಂದು ವಿಶೇಷವೆಂದರೆ ಇಲ್ಲಿಂದ ಅಲ್ಲಿಗೆ ಹೋದ ಪಕ್ಷಿಗಳು ತಾನು ಹುಟ್ಟಿರುವ ಜಾಗಕ್ಕೆ ಮತ್ತೆ ವಾಪಸ್ ಬಂದು ಮರಿ ಮಾಡಿ ಹೋಗುತ್ತವೆ. ಇದು ನಿಜಕ್ಕೂ ನಮ್ಮ ಪ್ರಕೃತಿಯ_ವಿಸ್ಮಯ

ಆಮೆಯ ಆಹಾರ ಮತ್ತು ಆಯಸ್ಸು:
ಹುಟ್ಟಿದ ಮರಿಯನ್ನು ತಾಯಿ ಆಮೆ ತನ್ನ ಕುತ್ತಿಗೆ ಹೊರ ಹಾಕಿ ತದೇಕ ಚಿತ್ತವಾಗಿ ದಿಟ್ಟಿಸಿ ನೋಡುತ್ತೆ ಮರಿಯೂ ತಾಯಿಯನ್ನು ಅದೇ ರೀತಿ ನೋಡುತ್ತೆ ಆಗ ತಾಯಿ ಆಮೆ ತನ್ನ ಮರಿಗೆ ಕೆಲ ಕಾಲ ತನ್ನ ಬಿಸಿಯುಸಿರು ನೀಡುತ್ತೆ. ಇದರಿಂದ ಮರಿ ತನ್ನ ಆಹಾರ ಮತ್ತು ಆಯಸ್ಸನ್ನು ವೃದ್ಧಿಸಿಕೊಳ್ಳುತ್ತದೆ. ಇವೆಲ್ಲವೂ ಭಗವಂತ ಪರಿಸರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಗಳು ಇವನ್ನು ನಾವು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















