ಕಲ್ಪ ಮೀಡಿಯಾ ಹೌಸ್ | ಸಾಗರ |
ದೈವಜ್ಞ ಸಮಾಜ ಬಾಂಧವರು ಊರು ಕಟ್ಟುವ ಕೆಲಸದಲ್ಲಿ ಸದಾ ಆಡಳಿತದ ಜೊತೆ ಕೈಜೋಡಿಸುತ್ತಿದ್ದಾರೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗೋಪಾಲಗೌಡ ಕ್ರೀಡಾಂಗಣದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಮತ್ತು ದೈವಜ್ಞ ದೀಪ ಪರಿವಾರದ ಆಶ್ರಯದಲ್ಲಿ ಏರ್ಪಡಿಸಿದ್ದ ನಾಲ್ಕು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡುತ್ತಿದ್ದರು.
ವಿದ್ಯಾವಂತ ಮತ್ತು ವ್ಯವಹಾರಸ್ತ ಸಮಾಜವಾಗಿರುವ ದೈವಜ್ಞ ಬಾಂಧವರು ದೇಶದ ಬಗ್ಗೆ ಹೆಚ್ಚು ಪ್ರೀತಿ ಇರಿಸಿಕೊಂಡಿದ್ದಾರೆ. ಊರಿನ ಎಲ್ಲ ಧಾರ್ಮಿಕ, ಸಾಮಾಜಿಕ ಕೆಲಸ ಯಶಸ್ಸಿನಲ್ಲಿ ನಿಮ್ಮ ಕೊಡುಗೆ ಇರುತ್ತದೆ. ಕ್ರೀಡೆಯ ಮೂಲಕ ರಾಜ್ಯದ ಬೇರೆಬೇರೆ ಭಾಗಗಳಿಂದ ತಂಡಗಳು ಬಂದಿರುವುದು ಸಂತೋಷ ತಂದಿದೆ ಎಂದು ಹೇಳಿದರು.
Also read: ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಮರಿಯಪ್ಪ ಅವಿರೋಧ ಆಯ್ಕೆ
ಇದೇ ಸಂದರ್ಭದಲ್ಲಿ ದೈವಜ್ಞ ಸಮಾಜದ ಯುವ ಮುಖಂಡ ಸಂತೋಷ್ ಶೇಟ್ ಅವರಿಗೆ ದೈವಜ್ಞ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕ್ರಿಕೇಟ್ ಪಂದ್ಯಾವಳಿಯಲ್ಲಿ ಶಿರಸಿ ತಂಡ ಪ್ರಥಮ, ಹೊನ್ನಾವರ ತಂಡ ದ್ವಿತೀಯ ಸ್ಥಾನ ಗಳಿಸಿದರು. ದೈವಜ್ಞ ದೀಪ ಪರಿವಾರದ ಅಧ್ಯಕ್ಷ ರಾಘವೇಂದ್ರ ಎಸ್.ಜಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮೋಹನ್ ಶೇಟ್, ಅರುಣ ಕುಮಾರ್, ಜ್ಯೋತಿ ಕಾಶಿನಾಥ್, ಹನುಮಂತ ಶೇಟ್, ರತ್ನಾಕರ ಶೇಟ್, ರಾಘವೇಂದ್ರ ಆರ್. ಶೇಟ್, ಪ್ರಶಾಂತ್ ರಾಯ್ಕರ್, ಸಮರ್ಥ, ರವಿ ಶೇಟ್ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post