ಕಲ್ಪ ಮೀಡಿಯಾ ಹೌಸ್ | ಸಾಗರ |
ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಸಾಗರ ನಗರ ಬಿಜೆಪಿಯಿಂದ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ MLA Halappa ಮಾತನಾಡಿ, ಇಂತಹ ಅಮಾನವೀಯ ಘಟನೆ ಮಾನವ ಕುಲ ಒಪ್ಪುವಂತಹದಲ್ಲ, ಎಲ್ಲೇ ಆಗಲಿ ಇಂತಹ ವಾತವರಣ ನಿರ್ಮಾಣವಾದಲ್ಲಿ ಜಾತಿ, ಮತ, ಪಕ್ಷ ಭೇದ ಮರೆತು ಅಂತಹ ಮತಾಂಧರನ್ನು ಹೆಕ್ಕಿ ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು. ಸಮಾಜದಲ್ಲಿ ಇಂತಹ ಮನುಕುಲದ ವಿರೋಧಿಗಳನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡುವುದರ ಮೂಲಕ ಅವರ ನೆಲೆಯನ್ನು ಧ್ವಂಸಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹೇಡಿಗಳ ತರಹ ಅಂಗಡಿಗೆ ನುಗ್ಗಿ ಉದಯಪುರದ ಟೈಲರ್ ಕನ್ನಯ್ಯ ರವರನ್ನು ಕೊಲೆ ಮಾಡಿದ್ದಾರೆ. ಇಂತಹವರಿಗೆ ಗುಂಡಿನ ಮೂಲಕವೇ ಉತ್ತರ ನೀಡಬೇಕು ಎಂದರು.
ಕಣ್ಣಿಗೆ ಕಣ್ಣು ಮುಯ್ಯಿಗೆ ಮುಯ್ಯಿ:
ಸಾಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಭಾಷಾಸಾಬ್ ಮಾತನಾಡಿ, ಯಾವುದೇ ಧರ್ಮವೂ ಯಾರನ್ನು ಕೊಲ್ಲಲು ಹೇಳಿಕೊಟ್ಟಿಲ್ಲ. ಇಂತಹ ಮತಾಂಧರಿಗೆ ಅರಬ್ ದೇಶಗಳಲ್ಲಿರುವ ಕೆಲವೊಂದು ಕಾಯ್ದೆಯನ್ನು ನಮ್ಮ ದೇಶದಲ್ಲೂ ಕಾನೂನು ಮಾಡಬೇಕು “ಕಣ್ಣಿಗೆ ಕಣ್ಣು ಮುಯ್ಯಿಗೆ ಮುಯ್ಯಿ”ಎಂಬ ಕಾನೂನು ತಂದು ಕೂಡಲೇ ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಜೀವಹಾನಿ ಮಾಡಲು ಯಾವುದೇ ಧರ್ಮಗ್ರಂಥ ಹೇಳಿಕೊಟ್ಟಿಲ್ಲ. ಎಲ್ಲಾ ಧರ್ಮಗಳು ಸರ್ವೇಜನ ಸುಖಿನೋ ಭವತುಃ ಎಂಬುವದನ್ನೆ ಹೇಳಿಕೊಟ್ಟಿರುವುದು. ಇಂತಹ ಮತಾಂಧ ಕಿಡಿಗೇಡಿಗೇಡಿಗಳಿಂದ ಎಲ್ಲಾರಿಗೂ ಕೆಟ್ಟ ಹೆಸರು ಕೂಡಲೇ ಸರ್ಕಾರ ನೂತನ ಕಾನೂನು ಜಾರಿ ಮಾಡುವ ಮೂಲಕ ಅವರನ್ನು ತತ್ತಕ್ಷಣ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
Also read: ಮುಸ್ಲಿಂ ವ್ಯಕ್ತಿಯ ಕೊಲೆಯಾಗಿದ್ದರೆ ಶಾಂತಿಯ ಮಾತನ್ನಾಡುತ್ತಿದ್ದಿರಾ? ರಾಹುಲ್ ಗಾಂಧಿಗೆ ಈಶ್ವರಪ್ಪ ಪ್ರಶ್ನೆ
ಸಾಗರ ನಗರ ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ.ಆರ್ ಗಣೇಶ್ ಪ್ರಸಾದ್ ಮಾತನಾಡಿ, ಕೆಲದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯಾಪಕವಾಗಿ ದಾಳಿ ಮಾಡಲಾಗುತ್ತಿದೆ. ಟಿವಿ ಚರ್ಚೆಯೊಂದರ ವೇಳೆ ಹಿಂದೂ ದೇವರ ನಿಂದನೆಗೆ ಪ್ರತಿಯಾಗಿ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪರ್ ಶರ್ಮ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಮಾತ್ರಕ್ಕೆ ಮಹಮದ್ ರೀಯಾಜ್, ಮಹಮದ್ ಬೇರಿ ಎಂಬ ಇಸ್ಲಾಮಿಕ್ ಜಿಹಾದಿಗಳು ಸ್ಥಳೀಯ ಟೈಲರ್ 40 ವರ್ಷದ ಕನ್ನಯ್ಯ ಲಾಲ್ ಎಂಬುವವರನ್ನು “ಹಾಡು ಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಅಮಾನುಷ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಇದರಿಂದ ಇಡೀ ಭಾರತೀಯ ನಾಗರಿಕ ಸಮಾಜ* ತಲೆತಗ್ಗಿಸುವಂತಾಗಿದೆ. ಇದು ಅತ್ಯಂತ ಹೇಯ ಹಾಗೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸಾಗರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೆ. ಆರ್. ಗಣೇಶ್ ಪ್ರಸಾದ್, ಟೈಲರ್ ಅಸೋಷಿಯನ್ ನ ಗೌರವಾಧ್ಯಕ್ಷ ಶ್ರೀಧರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ್ ರಾಯ್ಕರ್, ತುಕಾರಾಂ, ಅರುಣ್ ಕುಗ್ವೆ, ವಿನೋದ್ ರಾಜ್, ಶಂಕರ್, ಚೇತನ್ ರಾಜ್ ಕಣ್ಣೂರು, ಸಾಗರ ನಗರಸಭೆ ಸದಸ್ಯರಾದ ಲಿಂಗರಾಜು, ಮೈತ್ರಿ ಪಾಟೀಲ್, ಸತೀಶ್ ಮೋಗವೀರ, ತುಕಾರಾಂ, ಶ್ರೀನಿವಾಸ್ ಮೇಸ್ತ್ರಿ, ಸಂತೋಷ್ ಶೆಟ್, ರಾಜೇಂದ್ರ ಪೈ, ಪುರುಷೋತ್ತಮ್, ಸವಿತಾ ವಾಸು, ಪರಶುರಾಮ್, ಮಹೇಶ್, ರಾಧಿಕ ಪೈ ವಿವಿಧ ಬಿಜೆಪಿ ಘಟಕದ ಕಾರ್ಯಕರ್ತರು ಹಾಗೂ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post