ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೇವೇಂದ್ರನಿಗೆ ಸಹಸ್ರಾಕ್ಷನಾಗು ಎಂದು ಪ್ರಜಾಹಿತ ಬಯಸುವ ಋಷಿಗಳು ಸಲಹೆ ಕೊಟ್ಟರು. ದೇವೇಂದ್ರ-ನರೇಂದ್ರ. ಅಂದ್ರೆ ನರರಿಗೆ ಇಂದ್ರ. ಅಂದರೆ ರಾಜ ಎಂದರ್ಥ. ಸಹಸ್ರಾಕ್ಷ ಎಂದರೆ ಸಾವಿರ ಕಣ್ಣುಗಳುಳ್ಳವನು ಎಂದರ್ಥ. ಅಂದರೆ ಸರ್ವತೋ ಮುಖವಾಗಿ ವೀಕ್ಷಣೆ ಮಾಡುವವನು ಎಂದರ್ಥ.
ಉದಾಃ ಒಬ್ಬ ಪ್ರಧಾನಮಂತ್ರಿ ದೇಶದ ಸಮಸ್ತ ಸಮುದಾಯ ಮತಗಳ ಪ್ರಜೆಗಳ ಬಗ್ಗೆ ಕಾಳಜಿ ವಹಿಸಬೇಕಾದ ಜವಾಬ್ದಾರಿ ಬೇಕು. ಭಾರತದ ಪ್ರಧಾನಮಂತ್ರಿಯು ದೇವೇಂದ್ರ. ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತಾದಿ ಹಲವು ಸಮುದಾಯ ಮತಗಳಿವೆ. ಹಾಗೆಯೇ ಹಿಂದುಗಳ ಒಳಗೆ ಅನೇಕ ಸಂಪ್ರದಾಯ ಪದ್ಧತಿಗಳೂ ಇರುತ್ತದೆ. ಅಲ್ಲದೆ ಸಾವಿರಾರು ವೃತ್ತಿಪರರು ಇರುತ್ತಾರೆ. ಒಬ್ಬ ಪ್ರಧಾನಿಯಾಗಿ ಇವರೆಲ್ಲರ ಆಗು ಹೋಗುಗಳ ಬಗ್ಗೆ ಗಮನ ಇಡದಿದ್ದಾಗ Communal ಕಲಹಗಳಾಗಿ ದೇಶದ ಆಡಳಿತ ವ್ಯವಸ್ಥೆ ಹಾಳಾದೀತು. ಇದರ Encashment ಮಾಡಿಕೊಳ್ಳಲು ಅನೇಕ ವಿದೇಶಿ ದುಷ್ಟ ಶಕ್ತಿಗಳು, ದೇಶದ ಒಳಗಿನ ವಿರೋಧಿ ದುಷ್ಟ ಶಕ್ತಿಗಳು ಒಂದಾಗಿ, ದೇಶವು ತಮ್ಮದೇ ಆಡಳಿತಕ್ಕೆ ಬರಬೇಕೆಂಬ ಹಠದಿಂದ ದೇಶದ್ರೋಹದಂತಹ ಚಟುವಟಿಕೆಗಳಿಗೂ ಶುರುಮಾಡಿಯಾವು. ಇದನ್ನೂ ದೇಶದ ಪ್ರಧಾನಿಯು ಗಮನಿಸಬೇಕಾಗುತ್ತದೆ.
ಇನ್ನು, ಯಾರೋ ಪ್ರಧಾನಿಯ ಪರ ಇರುವವರು ತಮ್ಮ ಬೇಳೆ ಬೇಯಿಸಿಕೊಳ್ಳಲು, ತನಗಾಗದವರ ನಾಶಕ್ಕೂ ಬಯಸಬಹುದು. ಇದರ ಬಗ್ಗೆಯೂ ವಿಶೇಷ ವೀಕ್ಷಣೆಯ ಜ್ಞಾನವನ್ನು ಪ್ರಧಾನಮಂತ್ರಿಯಾದವರು ನೋಡಬೇಕಾಗುತ್ತದೆ. ಒಟ್ಟಿನಲ್ಲಿ ಪ್ರಧಾನಮಂತ್ರಿಯ ಜವಾಬ್ದಾರಿಯ ಆಧಾರದಲ್ಲೇ ದೇಶ ಉಳಿಯೋದು. ಹಿಂದಿನ ಸರಕಾರಗಳು ಮಾಡಿದ(ದೇಶ ವಿಭಜನೆಯಂತಹ, ಹಿಂದೂ ಮುಸ್ಲಿಂ ಕಲಹದಂತಹ ವಾತಾವರಣ) ಸೃಷ್ಟಿಸಿದ ಫಲವೇ ಈಗ ನಡೆಯುವ ಭಯೋತ್ಪಾದನಾ ಕ್ರಿಯೆ. ಆಗಿನ ಆಡಳಿತದ ಪ್ರಧಾನಿಗೆ ಸಹಸ್ರಾಕ್ಷ ಇದ್ದರೂ ಕೆಲವು ಕಣ್ಣುಗಳು ಮುಚ್ಚಿದ್ದವು. ಇದು ಅವರ ಸ್ವಾರ್ಥ(ಓಟಿಗಾಗಿ)ಕ್ಕಾಗಿತ್ತು. ಬಹುಷಃ ಈಗಿನ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ದೇವೇಂದ್ರನಿಗಿರುವ ಸಹಸ್ರಾಕ್ಷ ವೀಕ್ಷಣೆ ಇದೆ. ಹಾಗಾಗಿ ತಕ್ಷಣ ತಕ್ಷಣ ನಿರ್ಧಾರ ತೆಗೆದುಕೊಳ್ಳದೆ, ಶಾಸನಗಳನ್ನು ಭದ್ರಪಡಿಸುತ್ತಾ ಬರುತ್ತಿದ್ದಾರೆ. ಇದರಿಂದ ದೇಶದ ಭದ್ರತೆ ಹೆಚ್ಚಾಗುವುದು ಕಾಣುತ್ತಿದೆ.
ಸಮಾನ ನಾಗರಿಕ ಸಂಹಿತೆ(UCC, CAA, 370 ವಿಧಿಯ ರದ್ಧತಿ, ಸಮಾನ ಜನಸಂಖ್ಯಾ ನಿಯಂತ್ರಣ, ತ್ರಿತಲಾಕ್ ಮುಂತಾದವುಗಳು) ಇಲ್ಲಿ ಸತ್ಪ್ರಜೆಗಳ ಕರ್ತವ್ಯ ಬಹಳ ಇದೆ. ಪ್ರಧಾನಿಯವರನ್ನು ಆಯ್ಕೆ ಮಾಡಿದಲ್ಲಿಗೇ ನಮ್ಮ ಕೆಲಸ ಮುಗಿಯುವುದಿಲ್ಲ. ಅವರ ಕೈಂಕರ್ಯಕ್ಕೆ ಸಲಹೆ ನೀಡುವಂತದ್ದು, ದೇಶದ್ರೋಹಿಗಳನ್ನು ಪತ್ತೆ ಹಚ್ಚಿ ಸರಕಾರದ ಗಮನಕ್ಕೆ ತರುವಂತದ್ದು, ಅಭಿವೃದ್ಧಿ ವಿಚಾರದಲ್ಲಿ ಸಲಹೆ ಸೂಚನೆ ನೀಡುವಂತದ್ದು, ಮಾಡಿದ ಕೆಲಸಗಳನ್ನು ಪ್ರಜೆಗಳಿಗೆ ತಲುಪುವಂತೆ ಮಾಡುವುದು, ಅನುದಾನಗಳ ಸದುಪಯೋಗ ಮಾಡುವಂತೆ ಪ್ರಜೆಗಳಿಗೆ ತಿಳಿಸುವಂತದ್ದು ಮಾಡಿಕೊಂಡು ಬಂದಾಗ ದೇಶದ ಆಡಳಿತವು ಭದ್ರವೂ, ಆರೋಗ್ಯ ಪೂರ್ಣವೂ ಆಗುತ್ತದೆ. ಇದನ್ನೇ ನರೇಂದ್ರನ ಸಹಸ್ರಾಕ್ಷಿ ಎನ್ನುವುದು.
ಸಹಸ್ರ ಅಕ್ಷಗಳು ಸರಿಯಾಗಿ ವೀಕ್ಷಣೆ ಮಾಡಬೇಕಾದರೆ ಪ್ರಜೆಗಳ ಕೆಲಸವೂ ಸಾಕಷ್ಟಿದೆ. ಕೇವಲ ಸಹಸ್ರಾಕ್ಷ ಎಂದರೆ ಸಾಲದು, ಆ ಅಕ್ಷಿಗಳ maintenance ಕೂಡಾ ಆಗುತ್ತಿರಬೇಕು. ಆಗ ಮಾತ್ರ ನಾವು ನರೇಂದ್ರನನ್ನು ದೇವೇಂದ್ರನಾಗಿ ನೋಡಬಹುದು.
Get in Touch With Us info@kalpa.news Whatsapp: 9481252093
Discussion about this post