ಕಲ್ಪ ಮೀಡಿಯಾ ಹೌಸ್ | ಸಕಲೇಶಪುರ |
ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ #Heavy rain ಈಗಾಗಲೇ ಕರಾವಳಿಯ ಕೆಲವು ಕಡೆಗಳಲ್ಲಿ ಗುಡ್ಡ ಕುಸಿತ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಿರಾಡಿ ಘಾಟ್’ನಲ್ಲಿ #Shiradighat ರಾತ್ರಿ ವೇಳೆ ಸಂಚಾರ ನಿಷೇಧಿಸಲಾಗಿದೆ.
ರಾತ್ರಿ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಈ ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ, ಬೆಂಗಳೂರು ಹಾಗೂ ಮಂಗಳೂರು ಸಂಪರ್ಕಿಸುವ ಪರ್ಯಾಯ ರಸ್ತೆಗಳನ್ನು ವಾಹನ ಸವಾರರು ಬಳಸಬಹುದಾಗಿದೆ.
Also read: ಮನೆ ಊಟಕ್ಕಾಗಿ ದರ್ಶನ್ ನ್ಯಾಯಾಲಯದ ಮೊರೆ: ಹೈಕೋರ್ಟ್ ಆದೇಶವೇನು?

- ಬೆಂಗಳೂರು-ಹಾಸನ-ಶಿರಾಡಿಘಾಟ್-ಮಂಗಳೂರು (ಹಗಲು ಸಂಚಾರಕ್ಕೆ ಮಾತ್ರ ಅವಕಾಶ)
- ಬೆಂಗಳೂರು-ಚಿಕ್ಕಮಗಳೂರು-ಕೊಪ್ಪ-ಆಗುಂಬೆ-ಉಡುಪಿ- ಮಂಗಳೂರು(ಸ್ವಲ್ಪ ಕಿಮೀ ಹೆಚ್ಚಾಗುತ್ತದೆ)
- ಬೆಂಗಳೂರು – ಮೈಸೂರು – ಮಡಿಕೇರಿ – ಮಂಗಳೂರು (ರಾತ್ರಿ ಬಂದ್)
- ಬೆಂಗಳೂರು-ಹಾಸನ- ಚಿಕ್ಕಮಗಳೂರು- ಶೃಂಗೇರಿ-ಕಾರ್ಕಳ-ಮಂಗಳೂರು (ಹೆಚ್ಚುವರಿ 80 ಕಿಮೀ ಪ್ರಯಾಣಿಸಬೇಕು)
- ಬೆಂಗಳೂರು-ಹಾಸನ – ಚಾರ್ಮಾಡಿ ಘಾಟ್-ಮಂಗಳೂರು (ಕಷ್ಟಕರ ಪ್ರಯಾಣ, ಟ್ರಾಫಿಕ್ ಜಾಮ್)
- ಬೆಂಗಳೂರು- ಹಾಸನ- ಬಿಸಿಲೆ ಘಾಟ್ -ಮಂಗಳೂರು (ಅಪಾಯಕಾರಿ ಪ್ರಯಾಣ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post