ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್‌ವುಡ್ |
ಬಿಡುಗಡೆಯಾಗಿ ಮೂರು ವಾರ ಕಳೆದಿರುವ ಕಾಂತಾರ Kantara ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ಚಿತ್ರ ಈಗಾಗಲೇ 150 ಕೋಟಿಯನ್ನು ಬಾಚಿಕೊಂಡಿದೆ. ಈ ಚಿತ್ರದ ಅಬ್ಬರಕ್ಕೆ ಘಟಾನುಘಟಿಗಳ ಬರೋಬ್ಬರಿ 9 ಚಿತ್ರಗಳು ಅಕ್ಷರಶಃ ಮಕಾಡೆ ಮಲಗಿವೆ. ಪ್ರೇಕ್ಷಕರಿಂದ ಪಾಸಿಟಿವ್ ರಿವ್ಯೂ ಸಿಕ್ಕಿದ್ದ ಗುರುಶಿಷ್ಯರು ಹಾಗೂ ತೋತಾಪುರಿ ಚಿತ್ರಗಳು ಕಾಂತಾರ ಮುಂದೆ ಡಲ್ಲಾಗಿದೆ.
ಅಲ್ಲದೆ ಪ್ರಮುಖವಾಗಿ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ, ಆಯುಷ್‌ಮಾನ್ ಕುರಾನ ಅವರ ಡಾಕ್ಟರ್ ಜೀ, ಕೋಡ್‌ನೇಮ್ ತಿರಂಗಾ ಚಿತ್ರಗಳು ಕಾಂತಾರ ಮುಂದೆ ಅಡ್ಡಅಡ್ಡ ಮಲಗಿವೆ.
Also read: ಬೆಚ್ಚಿಬಿದ್ದ ದೇಶ: ಮಹಿಳೆ ಮೇಲೆ ಗ್ಯಾಂಗ್ ರೇಪ್, ಖಾಸಗಿ ಅಂಗಕ್ಕೆ ರಾಡ್ ತುರುಕಿದ ರಾಕ್ಷಸರು
ತೀರಾ ಪ್ರಮುಖವಾಗಿ ಹೃತಿಕ್ ರೋಷನ್ ಅಭಿನಯದ ವಿಕ್ರಮ್ ವೇದ ಚಿತ್ರ ವಿಶ್ವದಾದ್ಯಂತ ೧೨೭.೦೬ ಕೋಟಿ ರೂ. ಲೈಫ್‌ಟೈಮ್ ಕಲೆಕ್ಷನ್ ಗಳಿಸುವ ವೇಳೆಗೆ ಕಾಂತಾರ 150 ಕೋಟಿ ರೂ. ಗಡಿಯನ್ನು ಮುಟ್ಟಿತ್ತು. ಇದಲ್ಲದೆ ಪೊನ್ನಿನ್ ಸಲ್ವನ್, ಧನುಷ್ ಅಭಿನಯದ ನಾನೇ ವರುವೆನ್ ಹಾಗೂ ಗಾಡ್‌ಫಾದರ್ ಸಿನಿಮಾಗಳು ಆರಂಭದಲ್ಲಿ ಸದ್ದು ಮಾಡಿದರೂ ಕಾಂತಾರ ಮುಂದೆ ಸೋತು ಸುಣ್ಣವಾಗಿದೆ.
ಇದಲ್ಲದೆ ಕಾಂತಾರ ಚಿತ್ರ ಕೆಜಿಎಫ್‌ನ ಕೆಲವು ದಾಖಲೆಗಳನ್ನು ಹಿಂದಿಕ್ಕಿದೆ ಎಂದು ಹೇಳಲಾಗಿದ್ದರೂ, ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post