ಕಲ್ಪ ಮೀಡಿಯಾ ಹೌಸ್ | ಸಿನಿಮಾ ಸುದ್ಧಿ |
ಶಿವರಾಜ್‍ಕುಮಾರ್, #Shivarajkumar ಉಪೇಂದ್ರ #Upendra ಹಾಗೂ ರಾಜ್ ಬಿ. ಶೆಟ್ಟಿ #Raj B Shetty ನಟಿಸಿರುವ ಬಹು ನಿರೀಕ್ಷಿತ `45′ #45 ಚಿತ್ರದ ಟ್ರೇಲರ್ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗುತ್ತಿದೆ. ಅರ್ಜುನ್ ಜನ್ಯ ನಿರ್ದೇಶನದ ಈ ಚಿತ್ರದ ಟ್ರೇಲರ್‍ನಲ್ಲಿ ಸಾಕಷ್ಟು ಅಂಶಗಳಿದ್ದು ಕುತೂಹಲ ಕೆರಳಿಸಿದೆ.
ಈ ಚಿತ್ರದಲ್ಲಿ ಶಿವಣ್ಣ ಅವರು ಎರಡು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ `ಚೆಲುವೆಯ ನೋಟ ಚೆನ್ನ’ ಸಾಂಗ್ ಪ್ಲೇ ಆದಾಗ ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಆಭರಣ ಸುಂದರಿಯಾಗಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಶಿವಣ್ಣ ಅವರ ಲುಕ್ ಬಗ್ಗೆಯೇ ಅತಿ ಹೆಚ್ಚು ಚರ್ಚೆಯಾಗುತ್ತಿದೆ. ಇನ್ನು ಉಪೇಂದ್ರ ಕೂಡ ತನ್ನ ಎಂದಿನ ಸ್ಟೈಲ್ ಮೂಲಕ ಗಮನ ಸೆಳೆಯುತ್ತಾರೆ. `45′ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‍ನಲ್ಲಿದೆ. ಬೇರೆ ಭಾಷೆಗಳಲ್ಲೂ ಸಹ ಚಿತ್ರದ ಟ್ರೇಲರ್‍ಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗುತ್ತಿದೆ.
ಈ ಚಿತ್ರವನ್ನು ಸೂರಜ್ ಪೆÇ್ರಡಕ್ಷನ್ಸ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. 45 ಅಂದರೆ ಅದು ದಿನ, ನಿಮಿಷ ಏನಾದರೂ ಆಗಬಹುದು. ಈ ಚಿತ್ರಕ್ಕೆ `ವೆಲ್‍ಕಮ್ ಟು ದ ವಲ್ರ್ಡ್ ಆಫ್ 45′ ಎಂಬ ಟ್ಯಾಗ್‍ಲೈನ್ ಕೂಡ ಇದೆ. ಸಿನಿಮಾ ನೋಡಿದವರಿಗೆಲ್ಲ ಒಂದು ಹೊಸ ವಿಸ್ಮಯ ಜಗತ್ತನ್ನು ನೋಡಿದ ಅನುಭವ ಆಗುವುದು ನಿಶ್ಚಿತ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಹಿಂದಿಯಲ್ಲಿ ಮಾತ್ರ ಒಂದು ವಾರದ ನಂತರ ಬಿಡುಗಡೆ ಆಗುತ್ತದೆ’ ಎಂದು ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.
ಇದೊಂದು ಫ್ಯಾಂಟಸಿ ಸಿನಿಮಾ ಅನ್ನಬಹುದು. ಆದರೆ ಸಂಪೂರ್ಣವಾಗಿ ಫ್ಯಾಂಟಸಿ ವಿಭಾಗಕ್ಕೆ ಸೇರಿಕೊಳ್ಳುವುದಿಲ್ಲ. ಫ್ಯಾಂಟಸಿ ಜೊತೆಗೆ ಲಾಜಿಕ್ ಕೂಡ ಇದೆ. ಮೂವರು ನಾಯಕರ ಅಭಿಮಾನಿಗಳಿಗೆ ಎಲ್ಲೂ ಬೇಜಾರಾಗುವುದಿಲ್ಲ. ಗ್ರಾಫಿಕ್ಸ್‍ಗೆ ಸಾಕಷ್ಟು ಖರ್ಚು ಮಾಡಿ `45′ ಚಿತ್ರವನ್ನು ನಿರ್ಮಿಸಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















