ಬೆಂಗಳೂರು: ಅದ್ದೂರಿ ಚಿತ್ರದ ಮೂಲಕ ಸ್ಯಾಂಡಲ್’ವುಡ್’ಗೆ ಎಂಟ್ರಿ ಕೊಟ್ಟ ನಟ ಧ್ರುವಾ ಸರ್ಜಾ ತಮ್ಮ 14 ವರ್ಷಗಳ ಪ್ರೀತಿಗೊಂದು ಅರ್ಥ ಕೊಡಲು ಸಜ್ಜಾಗಿದ್ದು, ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಹೌದು… ಧ್ರುವಾ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರ ಕೈ ಹಿಡಿಯಲಿದ್ದು, ಇದೇ ನವೆಂಬರ್ 23 ಹಾಗೂ 24 ರಂದು ಇವರ ವಿವಾಹ ನಡೆಯಲಿದೆ.
ಧ್ರುವಾ ಕೈ ಹಿಡಿಯಲಿರುವ ಪ್ರೇರಣಾ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್ 19ರಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಈಗ ಅದ್ದೂರಿಯಾಗಿ ವಿವಾಹಕ್ಕೆ ಸಿದ್ದತೆ ನಡೆಸಲಾಗಿದ್ದು, ಮೈಸೂರು ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಇವರ ಕುಟುಂಬಸ್ಥರು ವಿಶಿಷ್ಠ ಹಾಗೂ ಭಾರತೀಯ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಹೀಗಾಗಿಯೇ, ಗೋವುಗಳ ನಡುವೆ ಇವರಿಬ್ಬರ ವಿವಾಹಕ್ಕೆ ಸರ್ಜಾ ಫ್ಯಾಮಿಲಿ ಬಿಗ್ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.
Discussion about this post