ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಳೇನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರು ಕೆಎಸ್’ಆರ್’ಪಿ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿರುವ ಹಿನ್ನೆಲೆಯಲ್ಲಿ ಈ ಠಾಣೆಯಿರುವ ರಸ್ತೆ ಸೇರಿದಂತೆ ಹಲವೆಡೆ ನಗರಸಭೆ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದೆ.
ಹಳೇನಗರ ಠಾಣೆ, ಈ ರಸ್ತೆಯಲ್ಲಿರುವ ಎಲ್ಲ ಮಳಿಗೆಗಳು, ಮನೆಗಳು ಹಾಗೂ ವಾಹನಗಳನ್ನು ಇಂದು ಮುಂಜಾನೆ ಸಂಫೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.
ಇದಲ್ಲದೇ, ಸಿಪಿಐ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ, ಹೊಟೇಲ್ ಪದ್ಮನಿಲಯ ಲಾಡ್ಜ್, ಬೊಮ್ಮನಕಟ್ಟೆ ಹಾಸ್ಟೆಲ್ ಸೇರಿದಂತೆ ವಿವಿದೆಢೆ ನಗರಸಭೆಯಿಂದ ಸ್ಯಾನಿಟೈಸ್ ಮಾಡಲಾಗಿದೆ.
ಇನ್ನು, ಹಳೇನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರ ವರದಿ ಇನ್ನೂ ಬರಬೇಕಿದೆ.
Get In Touch With Us info@kalpa.news Whatsapp: 9481252093














