ಟ್ರೇಲರ್ ಬಿಡುಗಡೆಯಾದ ನಂತರವೇ ಭಾರೀ ಕುತೂಹಲ ಕೆರಳಿಸಿದ್ದ ಹೊಸಬರ ಚಿತ್ರ ಸಂಕಷ್ಟಕರ ಗಣಪತಿ, ಬಿಡುಗಡೆಯಾಗಿ ಮೂರನೆಯ ವಾರವೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್‌ಸ್ ನಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಎರಡನೆಯ ವಾರ ಚಿತ್ರಮಂದಿರದ ಸಂಖ್ಯೆ 14ಕ್ಕೆ ಏರಿದ್ದು, ಚಿತ್ರ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಹಾಗೆಯೇ, ಮಲ್ಟಿಪ್ಲೆಕ್‌ಸ್ ಗಳಲ್ಲೂ ಸಹ ಪ್ರದರ್ಶನದ ಸಂಖ್ಯೆ ಏರಿಕೆಯಾಗಿದೆ.
ಕಿರುತೆರೆಯ ಮಜಾ ಟಾಕೀಟ್ ಹಾಗೂ ಪಾಪಾ ಪಾಂಡು ಶೋಗಳಲ್ಲೂ ಸಹ ಸಂಕಷ್ಟಕರ ಗಣಪತಿ ಸ್ಥಾನ ಪಡೆದು, ಅದ್ಬುತ ಪ್ರತಿಕ್ರಿಯೆ ಪಡೆದಿದೆ.
ಇನ್ನು, ರಾಜ್ಯದಲ್ಲಿ ಯಶಸ್ಸು ಕಂಡ ಈ ಚಿತ್ರ ಆಗಸ್‌ಟ್ 19ರಂದು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಬುಕ್ಕಿಂಗ್ ಓಪನ್ ಆಗಿದೆ.
Discussion about this post