ಬಹುತೇಕ ಹೊಸಬರ ಚಿತ್ರ ಸಂಕಷ್ಟಕರ ಗಣಪತಿ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ, ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಚಿತ್ರದ ತೆಲುಗು ರಿಮೇಕ್ ಹಕ್ಕು ಸೇಲಾಗಿದೆ.
ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ವಿಚಿತ್ರ ಖಾಯಿಲೆಯ ಕತೆಯನ್ನು ಆಧರಿಸಿ ತೆರೆಗೆ ಬಂದಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಹೊಸ ನಿರ್ದೇಶಕ ಅರ್ಜುನ್ ಕುಮಾರ್ ಹಾಗೂ ತಂಡ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ.
ಇನ್ನು, ಚಿತ್ರದ ಟ್ರೇಲರ್ ನೋಡಿದ್ದ ಪರಭಾಷಾ ಚಿತ್ರ ತಯಾರಕರು ಆಗಲೇ ಚಿತ್ರವನ್ನು ಮೆಚ್ಚಿಕೊಂಡಿದ್ದರು. ತೆಲುಗು ನಿರ್ಮಾಪಕ ವಿಜಯ್ ಈ ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದು, ಚಿತ್ರವನ್ನು ದಕ್ಷಿಣ ಭಾರತವೇ ಮೆಚ್ಚಿಕೊಳ್ಳುತ್ತಿದೆ ಎಂಬುದು ಸಾಬೀತಾಗುತ್ತಿದೆ.
ಕನ್ನಡದಲ್ಲಿ ಲಿಖಿತ್ ಶೆಟ್ಟಿ ಹಗೂ ಶೃತಿ ಗೊರಾಡಿಯಾ ಜೋಡಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ಯಾರು ಅಭಿನಯಿಸುತ್ತಾರೆ ಎಂಬುದು ಕುತೂಲಹ ಮೂಡಿಸಿದ್ದು, ನಾನಿ ಅಥವಾ ಸರ್ವಾನಂದ್ ಅಭಿನಯಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು, ಗಣಪತಿ ಚಿತ್ರವನ್ನು ಬಾಲಿವುಡ್ ಸಹ ಮೆಚ್ಚಿಕೊಂಡಿದ್ದು, ಅಲ್ಲಿಂದಲೂ ಸಹ ಬೇಡಿಕೆ ಬಂದಿದೆ ಎಂದು ಹೇಳಲಾಗಿದೆ.

















