ಭದ್ರಾವತಿ: ಶ್ರೀಜಗನ್ನಾಥದಾಸರ ಆರಾಧನಾ ಮಹೋತ್ಸವವನ್ನು ಅಖಿಲ ಭಾರತ ಮಾಧ್ವ ಮಹಾಮಂಡಳಿಯ ಭದ್ರಾವತಿ ಶಾಖೆ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಹಳೇನಗರ ಭಾಗದಲ್ಲಿ ಯಾಯೀವಾರ(ನಗರ ಸಂಕೀರ್ತನೆ) ಆಚರಿಸಲಾಯಿತು.
ಇನ್ನು ಜಗನ್ನಾಥ ದಾಸರ ಆರಾಧನಾ ಮಹೋತ್ಸವವನ್ನು ಸಿದ್ದರೂಢ ನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಚರಿಸಲಾಯಿತು. ಬಳ್ಳಾರಿಯ ಪಂಡಿತರಾದ ಪ್ರಭಂಜನಾಚಾರ್ಯ ಅವರು ಜಗನ್ನಾಥದಾಸರ ಜೀವನಚರಿತ್ರೆಯನ್ನು ತಿಳಿಸಿಕೊಟ್ಟರು.
ಇನ್ನು, ಆರಾಧನೆಯ ಅಂಗವಾಗಿ ಹರಿಕಥಾಮೃತಸಾರದ ವಿಜ್ಞಶ್ವರಸಂಧಿಯ ಬಗ್ಗೆ ಪ್ರಶ್ನೋತ್ತರ ಏರ್ಪಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಲ್ಲದೇ, ಮಂಡಳಿಯ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪ್ರತಿವರ್ಷದಂತೆ ಈ ಬಾರಿಯೂ ಸಹ ಪುರಸ್ಕರಿಸಲಾಯಿತು.
ಮಾಹಿತಿ: ಜಯತೀರ್ಥ, ಪ್ರಧಾನಕಾರ್ಯದರ್ಶಿ, ಅಖಿಲಭಾರತ ಮಾಧ್ವಮಹಾ ಮಂಡಳಿ, ಭದ್ರಾವತಿ
Discussion about this post