ಪನ್ಮಂಡಿ ಕ್ರಾಸ್ ಎಂಬ ಅವಾರ್ಡ್ ವಿನ್ನಿಂಗ್ ಕಿರುಚಿತ್ರ ನಿರ್ದೇಶಿಸಿ ರಾಜ್ಯದಾದ್ಯಂತ ಪ್ರಖ್ಯಾತಿ ಪಡೆದ ನಿರ್ದೇಶಕ ಅರ್ಜುನ್ ಕುಮಾರ್ ಆಕ್ಷನ್ ಕಟ್‌ನಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಸಂಕಷ್ಟಕರ ಗಣಪತಿ ಚಿತ್ರ ತೀವ್ರ ಸಂಚಲನ ಸೃಷ್ಠಿಸಿದೆ.
ಸಂಕಷ್ಟಕರ ಗಣಪತಿ ಚಿತ್ರ ಸಂಪೂರ್ಣ ರೊವ್ಯಾಂಟಿಕ್ ಹಾಗೂ ಕಾಮಿಡಿ ಅಂಶಗಳನ್ನು ಒಳಗೊಂಡಿದ್ದು, ಒಬ್ಬ ಕಾರ್ಟೂನಿಸ್‌ಟ್ ಜೀವನನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅರ್ಜುನ್. ಏಲಿಯಮ್ ಹ್ಯಾಂಡ್ ಎಂಬ ನ್ಯೂರೊಲೋಜಿಕಲ್ ಸಿಂಡ್ರೊಮ್ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. ಏಲಿಯಮ್ ಹ್ಯಾಂಡ್ ನ್ಯೂರೋಲೋಜಿಕಲ್ ಸಿಂಡ್ರೊûಮ್ ಎಂದರೆ ತಮ್ಮ ಎಡಗೈಯಿಂದ ಬೇರೆಯವರಿಗೆ ತನಗೆ ಅರಿವಿಲ್ಲದಂತೆ ಹೊಡೆಯುವುದು, ಈ ನ್ಯೂನ್ಯತೆಯಿಂದ ಬಳಲುವ ನಾಯಕ ಇದರಿಂದ ಎದುರಿಸುವ ಅನೇಕ ಸಂಕಷ್ಟಗಳನ್ನು ಯಾವ ರೀತಿ ಎದುರಿಸಿ ಅದರಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಕತೆ. ಒಂದು ಹಂತದಲ್ಲಿ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಲುಗಳನ್ನು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕತೆಯನ್ನು ಹೆಣೆಯಲಾಗಿದೆ.
ಸಂಕಷ್ಟ ಅಂದರೆ ತೊಂದರೆಗಳು, ಕರಕ್ಕೆ ಅರ್ಥ ಕೈ, ಈತನ ಹೆಸರು ಗಣಪತಿ ಆಗಿರುವುದರಿಂದ ಶೀರ್ಷಿಕೆಯನ್ನು ಇದೇ ರೀತಿಯಲ್ಲಿ ಇಡಲಾಗಿದೆ. ದೃಶ್ಯಗಳು ಸಹಜವಾಗಿ ಬರಲೆಂದು ನಿರ್ದೇಶಕರು ರೋಗಿ ಮತ್ತು ಚಿತ್ರಕಾರರನ್ನು ಭೇಟಿ ಮಾಡಿ ಅವರ ಹಾವಭಾವಗಳನ್ನು ಗ್ರಹಿಸಿ ಅದರಂತೆ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ.
ಒಗ್ಗರಣೆ ಡಬ್ಬಿ ಕಾರ್ಯಕ್ರಮದ ನಿರೂಪಕ ಹಾಗೂ ಎರಡು ತುಳು ಚಿತ್ರಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ವ್ಯಂಗ್ಯ ಚಿತ್ರಕಾರನ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರೆ, ಮಾರಾಟ ಪ್ರತಿನಿಧಿಯಾಗಿ ಶೃತಿ ಗುರಾಡಿಯಾ ನಾಯಕಿ ಪಾತ್ರದಲ್ಲಿದ್ದಾರೆ. ಐದು ಹಾಡುಗಳಿಗೆ ಲಿಖಿತ್ ಮುರಳೀಧರ್ ಸಂಗೀತ ಸಂಯೋಜಿಸಿದ್ದು, ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ರಾಜೇಶ್ ಬಾಬು, ಪೈಜಲ್ ಖಾನ್, ಬಿ.ಎಸ್. ಜೋಡಿದಾರ್, ಹೇಮಂತ್ ಕುಮಾರ್, ಪ್ರಮೋದ್ ನಿಂಬಾಳ್ಕರ್ ಹಾಗೂ ಎ. ಚೆಲುವರಾಜ ನಾಯ್ಡು ನಿರ್ಮಾಣ ಮಾಡಿದ್ದಾರೆ.
ಸಂಪೂರ್ಣ ಚಿತ್ರೀಕರಣ ಬೆಂಗಳೂರು, ಒಂದು ಹಾಡನ್ನು ಗಾಂಧಿಕೋಟೆ, ಪೆನ್ನಾರ್ ನದಿ ತೀರದಲ್ಲಿ ಸೆರೆ ಹಿಡಿಯಲಾಗಿದೆ.
ಇನ್ನು, ಈ ಚಿತ್ರದ ನಿರ್ದೇಶಕ ಅರ್ಜುನ್ ಕುಮಾರ್ ಸೇರಿದಂತೆ ಹಲವರು ಶಿವಮೊಗ್ಗ ಮೂಲದವರಾಗಿದ್ದಾರೆ. ಡೈನಾಮೈಟ್ ಫಿಲ್‌ಸ್ಮ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದ ಸಂಗೀತ ನಿರ್ದೇಶನ ಶಿವಮೊಗ್ಗದ ಮತ್ತೊಬ್ಬ ಸಾರಸ್ವತ ಲೋಕದ ಕಲಾವಿದ ರಿತ್ವಿಕ್ ಮುರಳೀಧರ್ ನಿರ್ವಹಿಸಿದ್ದಾರೆ. ಹೀಗೆ ಚಿತ್ರದ ಬಹುಪಾಲು ಅಂಶಗಳಾದ ತಂತ್ರಜ್ಞಾನ, ಕಲಾವಿದರ ವಿಭಾಗದಲ್ಲಿ ಹೊಸ ಪ್ರತಿಭೆಗಳಿಂದ ಕೂಡಿದೆ.
ಇನ್ನು ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಿಸಿರುವ ಪಿಆರ್‌ಕೆ ಆಡಿಯೋ ಸಂಸ್ಥೆ ಸಂಕಷ್ಟಕರ ಗಣಪತಿ ಚಿತ್ರದ ಆಡಿಯೋ ಹಕ್ಕುಗಳ ಹೊಣೆ ಹೊತ್ತಿರುವುದು ಚಿತ್ರ ತಂಡದ ಹುಮ್ಮಸ್ಸು ನೂರ್ಮಡಿಗೊಳಿಸಿದೆ.
ಅಂಜನಿಪುತ್ರ, ಟಗರುಗಳಂತಹ ಯಶಸ್ವಿ ಕನ್ನಡ ಚಿತ್ರಗಳ ಆಡಿಯೋ ರಾಜ್ಯಕ್ಕೆ ನೀಡಿದ ಪಿಆರ್‌ಕೆ ಆಡಿಯೋ ಸಂಸ್ಥೆ ಹೊಸ ಪ್ರತಿಭೆಗಳನ್ನು ತಮ್ಮ ಸಂಸ್ಥೆಯ ಬ್ಯಾನರ್ ಮೂಲಕ ಅವಕಾಶ ನೀಡಿ ಪರಿಚಯಿಸುತ್ತಿರುವುದು ಶ್ಲಾಘನೀಯ.
ಇನ್ನು ಚಿತ್ರ ತಂಡದ ಕಿಚ್ಚ ಸುದೀಪ್ ಅವರ ಕಣ್ಣು ಬಿದ್ದಿದ್ದು, ಹೊಸಬರ ಈ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ.
Sankashta Kara Ganapathi (Official Trailer) | Likith Shetty, Shruti | Ar… https://t.co/H8RidCm9sz via @YouTube
Concept looks very promising … Imagine a hand of urs going totally outta ur control n doin what it wants 😄.
Applauds to th thought.
Best wshs tot h team. Cheers— Kichcha Sudeepa (@KicchaSudeep) June 3, 2018
ಈ ಕುರಿತಂತೆ ಟ್ವೀಟ್ ಮಾಡಿರುವ ಸುದೀಪ್, ಚಿತ್ರದ ಪರಿಕಲ್ಪನೆಯನ್ನು ಮೆಚ್ಚಿ ಚೀಯರ್‌ಸ್ ಎಂದಿದ್ದಾರೆ.
Discussion about this post