ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ Kuvempu University ದೂರ ಶಿಕ್ಷಣ ವಿಭಾಗ ನಡೆಸಿದ 2022ನೆಯ ಸಾಲಿನ ಬಿಎ ಪರೀಕ್ಷೆಯಲ್ಲಿ ಭದ್ರಾವತಿಯ ಗೃಹಣಿ ಎಚ್.ಎಂ. ಪುಷ್ಪಾ ಅವರು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಲ್ಯಾಬೊರೇಟರೀಸ್ ಸೂಪರ್’ವೈಸರ್ ಎಲ್. ಮಧುಕುಮಾರ್ ಅವರು ಧರ್ಮಪತ್ನಿಯಾದ ಪುಷ್ಪಾ ಅವರು ಪ್ರಥಮ ರ‍್ಯಾಂಕ್ ಗಳಿಸಿದ್ದು, ಇತ್ತೀಚೆಗೆ ನಡೆದ 33ನೆಯ ಘಟಿಕೋತ್ಸವದಲ್ಲಿ ಪ್ರಮಾಣಪತ್ರವನ್ನು ಪಡೆದರು.
ಪುಷ್ಪಾ ಅವರು ಓದುವುದು, ಬರವಣೆಗೆ, ನೃತ್ಯ, ಸೃಜನಾತ್ಮಕ ಕಲೆ ಇತ್ಯಾದಿ ಹವ್ಯಾಸಗಳನ್ನು ರೂಢಿಸಿಕೊಂಡಿದ್ದು, ಭವಿಷ್ಯದಲ್ಲಿ ಶಿಕ್ಷಕಿಯಾಗುವ ಹಂಬಲ ಹೊಂದಿದ್ದಾರೆ.
Also read: ಶಿವಮೊಗ್ಗದ ಪಿಇಎಸ್’ಐಟಿಎಂ ವಿದ್ಯಾಸಂಸ್ಥೆಗೆ ನ್ಯಾಕ್ `A’ ಗ್ರೇಡ್ ಮಾನ್ಯತೆ
ವಿಐಎಸ್‌ಎಲ್ ಸಮುದಾಯವು ಪುಷ್ಪಾ ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸಿದೆ.
ಪುಷ್ಪಾ ಅವರ ಈ ಸಾಧನೆಗೆ ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















