ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಸಿನಿಮಾಗಳು ಕೇವಲ ದೃಶ್ಯ ಕಥಾನಕಗಳಲ್ಲ. ಅವು ಜೀವನದ ಸಣ್ಣ ತುಣುಕುಗಳು. ದೃಶ್ಯ, ಧ್ವನಿ, ಸಂಗೀತ, ಪಾತ್ರ ಮತ್ತು ದೃಶ್ಯ ಸಜ್ಜಿಕೆಯ ಮೂಲಕ ನಿರ್ದೇಶಕ ಕಟ್ಟಿಕೊಡುವ ವಾಸ್ತವಿಕ ಜಗತ್ತು. ಈ ನಿಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿ ಬೆಳೆಸುವ ಮತ್ತು ಕಲಾತ್ಮಕತೆಯನ್ನು ಅನಾವರಣಗೊಳಿಸುವ ಜಾಗತಿಕ ಗುಣಮಟ್ಟದ ಸಿನಿಮಾಗಳು ಇಂದಿನ ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ #Kuvempu University ಜ್ಞಾನಸಹ್ಯಾದ್ರಿ ಆವರಣದಲ್ಲಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿರುವ 16ನೇ ವರ್ಷದ “ಸಹ್ಯಾದ್ರಿ ಸಿನಿಮೋತ್ಸವ”ವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜಗತ್ತಿನ ಅತ್ಯುತ್ತಮ ಚಲನಚಿತ್ರಗಳು ಪೂರ್ವ ಏಷ್ಯಾದ ಜಪಾನ್, ಹಾಂಕಾಂಗ್, ಕೊರಿಯಾ ದೇಶಗಳಲ್ಲಿ ನಿರ್ಮಾಣವಾಗುತ್ತಿವೆ. ಇನ್ನು ಭಾರತೀಯ ಸಿನಿಮಾರಂಗದಲ್ಲಿ ಮಲಯಾಳಂ, ಬೆಂಗಾಲಿ ಮತ್ತು ಸ್ವಲ್ಪಮಟ್ಟಿಗೆ ತಮಿಳು ಚಿತ್ರರಂಗ ಎಲ್ಲಾ ಆಯಾಮಗಳಲ್ಲಿಯೂ ಉತ್ತಮ ಎಂದು ಪರಿಗಣಿಸಬಹುದಾದ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸುತ್ತಿವೆ. ಆದರೆ ಕನ್ನಡ ಚಿತ್ರರಂಗ ದಿನೇ ದಿನೇ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ವರ್ಗೀಸ್ ಪಿ.ಎ , ಪ್ರೊ.ಸತೀಶ್ ಕುಮಾರ್, ಪ್ರೊ. ಸತ್ಯಪ್ರಕಾಶ್. ಎಂ. ಆರ್, ಡಾ. ರುಮಾನ ತನ್ವೀರ್, ವರ್ಣಶ್ರೀ, ರಾಸುಮ, ದೊರೆಸ್ವಾಮಿ, ಸುನಿಲ್ ಮತ್ತು ವಿವಿಧ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post