ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನೇಮಕಗೊಂಡಿದ್ದ ಎ. ಎಲ್. ಮಂಜುನಾಥ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕುವೆಂಪು ವಿವಿ Kuvempu University ಕುಲಸಚಿವರನ್ನು ವರ್ಗಾಯಿಸಿ ಹೊಸ ಕುಲಸಚಿವರನ್ನು ನಿಯುಕ್ತಿಗೊಳಿಸಿ ಫೆ. 28ರಂದು ಸರ್ಕಾರ ಆದೇಶ ಹೊರಡಿಸಿತ್ತು. ಸೋಮವಾರ ಬೆಳಿಗ್ಗೆ ಕೆಎಎಸ್ ಸೂಪರ್ ಟೈಮ್ ಶ್ರೇಣಿಯ ಅಧಿಕಾರಿ ಎ. ಎಲ್. ಮಂಜುನಾಥ್ ಕರ್ತವ್ಯ ಆರಂಭಿಸಿದ್ದಾರೆ.

Also read: ರಾಜ್ಯದಲ್ಲಿ ಬಿಜೆಪಿಯವರಿಗೆ ಬಾಲಬಿಚ್ಚಲು ಬಿಡುವುದಿಲ್ಲ: ಸಚಿವ ಮಧುಬಂಗಾರಪ್ಪ ಆಕ್ರೋಶ
ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಎಸ್. ವಿ. ಕೃಷ್ಣಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಡಾ. ಕೆ. ಆರ್. ಮಂಜುನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post