ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ವಿಭಾಗ, ಕಾಲೇಜುಗಳು ಮತ್ತು ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಅತ್ಯುತ್ತಮ ಕಾರ್ಯನಿರ್ವಹಿಸಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಕುಲಪತಿ ಪ್ರೊ. ವೀರಭದ್ರಪ್ಪ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊ ಹಿರೇಮಠ ಸಬಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಿಡಕ್ಕೆ ನೀರುಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಂದರೆ ರಾಷ್ಟ್ರ/ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಇವರು ಅರ್ಹತೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ನಾಗರಾಜ ಪರಿಸರ ಇವರು ಉತ್ತಮ ಕಾರ್ಯನಿರ್ವಹಿಸಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಲಸಚಿವರು (ಪ) ಪ್ರೊ ನವೀನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ ಎಸ್ ಎಸ್ ಸ್ವಯಂ ಸೇವಕರು ಭಾರತದಾಧ್ಯಂತ ಅತ್ತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ದೇಶಾಭಿಮಾನ ಬೆಳೆಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ 2021-22 ಮತ್ತು 2022-23ನೇ ಸಾಲಿನ ಎನ್.ಎಸ್.ಎಸ್. ಸಾಧನೆ ಮಾಡಿದ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಘಟಕ, ಅಧಿಕಾರಿ ಮತ್ತು ಸ್ವಯಂ ಸೇವಕ/ಸೇವಕಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ .ವೆಂಕಟೇಶ್ ಹಾಗು ಕು. ರಕ್ಷಿತಾ ಸಿ ಡಿ ಇವರನ್ನು ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಡಾ. ಸಂಧ್ಯಾಕಾವೇರಿ, ಡಾ. ಪದ್ಮೇ ಗೌಡ ಮತ್ತು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಪ್ರೊ ವಿಷ್ಣು ಮೂರ್ತಿ ಉಪಸ್ಥಿತರಿದ್ದರು.
Also read: ಪಿಎಂ ಆವಾಸ್ ಯೋಜನೆಗೆ ವಾರದಲ್ಲಿ ಫಲಾನುಭವಿಗಳ ಪಟ್ಟಿ ನೀಡಿ: ಸಚಿವ ಜಮೀರ್ ಸೂಚನೆ
ಮೇಘಶ್ರೀ ಮತ್ತು ರಕ್ಷಿತಾ ನಿರೂಪಿಸಿದರು.ಡಿ ವಿ ಎಸ್ ಕಾಲೇಜು ರಾಸೇಯೋ ಅಧಿಕಾರಿ ಮಲ್ಲಿಕಾರ್ಜುನ್ ವಂದಿಸಿದರು. ಸಮಾರಂಭದಲ್ಲಿ ಸುಮಾರು 300 ಜನ ಪ್ರಾಂಶುಪಾಲರು, ಅಧಿಕಾರಿಗಳು, ಸ್ವಯಂ ಸೇವಕರು ಮತ್ತು ಪೋಷಕರು ಭಾಗವಹಿಸಿದ್ದರು.
2021-22ನೇ ಸಾಲಿನ ಪ್ರಶಸ್ತಿಗಳು :
ಅತ್ತ್ಯುತ್ತಮ ಎನ್.ಎಸ್.ಎಸ್. ಘಟಕ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು ಮತ್ತು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು
ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ : ಶ್ರೀ ತ್ರಿಶೂಲ್ ಜಿ. ಎಸ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು ಮತ್ತು
ಡಾ.ರಾಜುನಾಯ್ಕ ಎಸ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು
ಅತ್ಯುತ್ತಮ ಎನ್.ಎಸ್.ಎಸ್. ಸ್ವಯ೦ ಸೇವಕಿ : ಕುಮಾರಿ ಅಂಜಲಿ ಎ., ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ
2022-23ನೇ ಸಾಲಿನ ಪ್ರಶಸ್ತಿಗಳು :
ಅತ್ಯುತ್ತಮ ಎನ್.ಎಸ್.ಎಸ್. ಘಟಕ : ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ, ಕಮಲಾ ನೆಹರೂ ಮಹಿಳಾ ಕಾಲೇಜು,
ಶಿವಮೊಗ್ಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ.
ಅತ್ಯುತ್ತಮ ಎನ್.ಎಸ್.ಎಸ್. ಅಧಿಕಾರಿ : ಪ್ರೊ. ಜಗದೀಶ್ ಎಸ್., ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ,
ಪ್ರೊ. ಬಾಲಕೃಷ್ಣ ಹೆಗ್ಡೆ, ಕಮಲಾ ನೆಹರೂ ಮಹಿಳಾ ಕಾಲೇಜು ಮತ್ತು
ಪ್ರೊ. ಹರೀಶ್ ಡಿ. ಎಲ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ.
ಅತ್ಯುತ್ತಮ ಎನ್.ಎಸ್.ಎಸ್. ಸ್ವಯಂ ಸೇವಕ: ಶೋಭಿತ್ ಎನ್. ಜೆ., ಸಹ್ಯಾದ್ರಿ ವಿಜ್ಞಾನ ಕಾಲೇಜು,ಶಿವಮೊಗ್ಗ
ಅತ್ತ್ಯುತ್ತಮ ಎನ್.ಎಸ್.ಎಸ್. ಸ್ವಯಂ ಸೇವಕಿ : ಸಿಂಚನ ಎಂ., ಶ್ರೀಮತಿ ಇಂದಿರಾಗಾಂಧಿ ಸ.ಪ್ರ.ದ. ಮಹಿಳಾ ಕಾಲೇಜು, ಸಾಗರ, ಸಿಂಚನ ಜೆ., ಸ್ನಾತಕೋತ್ತರ ವನ್ಯಜೀವಿ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















