ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದಲ್ಲಿ Kumvempu University ಫೆ. 23ರಂದು ಡಿಜಿಟಲ್ ಪತ್ರಿಕೋದ್ಯಮದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪ್ರೊ. ಡಿ.ಎಸ್. ಪೂರ್ಣಾನಂದ ಅವರ ಗೌರವಾರ್ಥವಾಗಿ ವಿಭಾಗ ಮತ್ತು ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘಗಳು ಜಂಟಿಯಾಗಿ ಫೆ. 23ರಂದು ‘ಡಿಜಿಟಲ್ ಪತ್ರಿಕೋದ್ಯಮ: ಸವಾಲುಗಳು ಮತ್ತು ನಿರೀಕ್ಷೆಗಳು’ ವಿಷಯ ಕುರಿತು ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಿವೆ. ವಿಚಾರ ಸಂಕಿರಣದ ದಿಕ್ಸೂಚಿ ಭಾಷಣವನ್ನು ತಮಿಳುನಾಡಿನ ಗುಂಡಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ಮತ್ತು ಬಹುಮಾಧ್ಯಮ ಸಂಶೋಧನ ಕೇಂದ್ರದ (ಇ.ಎಂ.ಆರ್.ಸಿ.) ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ ಮಾಡಲಿದ್ದಾರೆ ಎಂದು ವಿಭಾಗದ ಪ್ರಕಟಣೆ ತಿಳಿಸಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಪ್ರಭಾರ ಕುಲಸಚಿವೆ ಪ್ರೊ. ಗೀತಾ ಸಿ., ಮತ್ತು ವಯೋನಿವೃತ್ತಿ ಹೊಂದಿದ ಪ್ರಾಧ್ಯಾಪಕ ಡಾ. ಡಿ. ಎಸ್. ಪೂರ್ಣಾನಂದ ಆಗಮಿಸಲಿದ್ದಾರೆ. ಜೊತೆಗೆ ವಿಭಾಗದ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಎಂ. ಆರ್. ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಪ್ರೊ. ಸತೀಶ್‌ಕುಮಾರ್, ಪ್ರೊ. ವರ್ಗೀಸ್, ಡಾ. ರಾಘವೇಂದ್ರ ಉಪಸ್ಥಿತರಿರಲಿದ್ದಾರೆ.
ವಿಚಾರ ಸಂಕಿರಣಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವ ಇ.ಎಂ.ಆರ್.ಸಿ. ನಿರ್ದೇಶಕ ಪ್ರೊ. ಅರುಲ್‌ಚೆಲ್ವನ್ ಶ್ರೀರಾಮ್ ‘ಪ್ರಾದೇಶಿಕ ಭಾಷೆಗಳಲ್ಲಿನ ಡಿಜಿಟಲ್ ಪತ್ರಿಕೋದ್ಯಮದ ಸ್ಥಿತಿಗತಿಗಳು’ ಹಾಗೂ ಈದಿನ ಸುದ್ದಿತಾಣದ ಮುಖ್ಯಸಂಪಾದಕರಾದ ಅಶೋಕ್ ರಾಮ್ ಡಿ. ಆರ್. ‘ಡಿಜಿಟಲ್ ಪತ್ರಿಕೋದ್ಯಮ ಕಲಿಕೆಯ ಸವಾಲುಗಳು’ ವಿಷಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















