ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಇತ್ತೀಚೆಗೆ ಪ್ರತಿಷ್ಠಿತ ಮ್ಯಾಗಜಿನ್ ಔಟ್ ಲುಕ್- ಐಕೇರ್ ಸಂಸ್ಥೆ #Outlook-ICare ಬಿಡುಗಡೆ ಮಾಡಿರುವ ದೇಶದ ಸಾರ್ವಜನಿಕ ವಿಶ್ವವಿದ್ಯಾಲಯದ ರ್‍ಯಾಂಕಿಂಗ್ ನಲ್ಲಿ ಕುವೆಂಪು ವಿವಿ #Kuvempu University 30ನೇ ಶ್ರೇಣಿ ಪಡೆದು ಮಹತ್ವದ ಸಾಧನೆ ಮಾಡಿದೆ.
ಕಳೆದ ತಿಂಗಳು ನ್ಯಾಕ್ ನಿಂದ ‘ಎ’ ಶ್ರೇಣಿ #’A’ Grade From NAAC ಪಡೆದು ಹೆಮ್ಮೆ ಮೂಡಿಸಿದ್ದ ವಿವಿ, ಮತ್ತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದೆ.

ಕುವೆಂಪು ವಿವಿ ಒಟ್ಟು 862.25 ಅಂಕಗಳೊಂದಿಗೆ 30ನೇ ಸ್ಥಾನ ಪಡೆದಿದೆ. ಉಳಿದಂತೆ ಕರ್ನಾಟಕದ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ 6ನೇ ಸ್ಥಾನ ಪಡೆದಿದ್ದರೆ, ಮೈಸೂರು ವಿವಿ 08ನೇ ಸ್ಥಾನ ಮತ್ತು ಬೆಂಗಳೂರು ವಿವಿ 24ನೇ ಸ್ಥಾನ ಮತ್ತು ಮಂಗಳೂರು ವಿವಿ 44ನೇ ಸ್ಥಾನ ಪಡೆದು, ದೇಶದ ಟಾಪ್ 50ರೊಳಗೆ ಸ್ಥಾನ ಪಡೆದಿವೆ.

ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ: ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ ಕೌನ್ಸಿಲಿಂಗ್ ಆ. 29 ಮತ್ತು 30ಕ್ಕೆ ನಿಗದಿಯಾಗಿದ್ದು, ವಿದ್ಯಾರ್ಥಿಗಳು ಆ. 22ರವರೆಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post