ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯವು Kuvemou University ನೈಸರ್ಗಿಕ ಸೌಂದರ್ಯವಾಗಿರುವುದು ಮಾತ್ರವಲ್ಲ, ಅನೇಕ ಔಷಧೀಯ ಸಸ್ಯ ಮತ್ತು ಪ್ರಭೇದಗಳನ್ನು ಒಳಗೊಂಡಿದೆ. ಈ ಕುರಿತು ಸಂಶೋಧನೆ ಕೈಗೊಳ್ಳಲು ಮುಂದಾಗಿರಿ ಎಂದು ಕೇಂದ್ರೀಯ ಔಷಧೀಯ ಸಸ್ಯಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ದಿನೇಶ್ ಎ. ನಾಗೇಗೌಡ ಕರೆನೀಡಿದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ (DST-STUTI)ದ ಪ್ರಾಯೋಜಕತ್ವದಲ್ಲಿ ವಿವಿಯ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ಮೈಸೂರಿನ ಜೆ.ಎಸ್.ಎಸ್. ಸಂಶೋಧನೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ವಿವಿಯಲ್ಲಿ ಫೈಟೋಮೆಡಿಸಿನ್ ಸಂಶೋಧನೆ ಕುರಿತು ಆಯೋಜಿಸಿರುವ 7 ದಿನಗಳ ರಾಷ್ಟ್ರೀಯ ಕಾರ್ಯಗಾರವನ್ನು ಇತ್ತೀಚೆಗೆ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನೈಸರ್ಗಿಕ ಸೌಂದರ್ಯದಲ್ಲಿ ಜೀವಂತವಾಗಿರುವ ಕುವೆಂಪು ವಿಶ್ವವಿದ್ಯಾಲಯದ ಆವರಣ ಔಷಧೀಯ ಸಸ್ಯಪ್ರಭೇಧಗಳನ್ನು ಒಳಗೊಂಡಿದೆ. ಜೊತೆಗೆ ಕರ್ನಾಟಕದಲ್ಲಿ ವಿಶಾಲವಾಗಿ ವಿಸ್ತರಿಸುವ ಪಶ್ಚಿಮ ಘಟ್ಟಗಳು ಅನೇಕ ಬಗೆಯ ಸಸ್ಯ ಸಂಪನ್ಮೂಲಗಳನ್ನು ಮತ್ತು ಪ್ರಭೇದಗಳನ್ನು ಒಳಗೊಂಡಿದೆ. ಜಗತ್ತನ್ನು ಭಾಧಿಸುತ್ತಿರುವ ರೋಗಗಳಿಂದ ರಕ್ಷಣೆ ಪಡೆಯಲು ಭಾರತದ ಈ ಸಸ್ಯಸಂಪತ್ತು ಸಂಪದ್ಭರಿತವಾಗಿದೆ. ಇದನ್ನು ಅರಿತು ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಸಂಶೋಧನೆ ನಡೆಸಬೇಕು, ಜ್ಞಾನ ಮೂಲಗಳನ್ನು ಶ್ರೀಮಂತಗೊಳಿಸಬೇಕು ಎಂದು ತಿಳಿಸಿದರು.
ಮೈಸೂರಿನ ಜೆ.ಎಸ್.ಎಸ್. ಸಂಶೋಧನೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಶಾಂತ್ ಎಂ. ವಿಶ್ವನಾಥ್ 7 ದಿನಗಳ ರಾಷ್ಟ್ರೀಯ ಸಂಶೋಧನಾ ಕಾರ್ಯಗಾರದಲ್ಲಿ ಕೈಗೊಳ್ಳಬೇಕಾದ ಸಂಶೋಧನಾ ಪರೀಕ್ಷೆಗಳು, ಪ್ರಾಯೋಗಿಕ ಜ್ಞಾನಗಳಿಕೆಯ ಬಗ್ಗೆ ಅಭ್ಯರ್ಥಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಡಾ. ನಿರಂಜನ್ ಪುಟ್ಟಪ್ಪ, ಪ್ರೊ. ಜಿ. ಜೆ. ಸತೀಶ ಮತ್ತು ಪ್ರೊ. ಎಸ್. ಈ. ನೀಲಗುಂದ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ಎನ್, ಡಾ. ಬಿ. ಟಿ. ಪ್ರಭಾಕರ್, ಜೆ.ಎಸ್.ಎಸ್. ಕಾಲೇಜಿನ ಡಾ. ಸುಬ್ಬಾರಾವ್ ಎಂ. ವಿ., ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post