ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಇಂದಿನ ಕೆಲವು ಪತ್ರಿಕೆಗಳಲ್ಲಿ ಯುಯುಸಿಎಂಸ್ ಮೂಲಕ ನೀಡಿದ ಫಲಿತಾಂಶ ಕುರಿತಾಗಿ ಪ್ರಟಕವಾದ ವರದಿಗಳು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿರುವ ವರದಿಗಳು ಬಂದಿವೆ. ಎಲ್ಲ ವಿಶ್ವವಿದ್ಯಾಲಯಗಳಂತೆಯೇ ಕುವೆಂಪು ವಿವಿಯು ಸಹ ಯುಯುಸಿಎಂಎಸ್ (ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ) ಮೂಲಕ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಕೆಲವು ವಿಷಯಗಳಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ವಿವಿಯು ಸ್ಪಷ್ಟೀಕರಣ ನೀಡಿದೆ.
ಪ್ರಥಮ ಸೆಮಿಸ್ಟರ್‌ಗೆ ಸಂಬಂಧಿಸಿದ Digital Fluency, Financial Accounting ಮತ್ತು Fundamentals of Business Accounting ವಿಷಯಗಳಲ್ಲಿ ಅನುತ್ತೀರ್ಣರಾದಂತಹ ವಿದ್ಯಾರ್ಥಿಗಳು ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಗಳನ್ನು ತೆಗೆದುಕೊಳ್ಳದೆ ಇರಲು ಸೂಚಿಸಲು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಲಾಗಿದೆ. UUCMSನಲ್ಲಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯಲ್ಲಿನ ದೋಷಗಳನ್ನು ಸರಿಪಡಿಸಿದ ನಂತರದಲ್ಲಿ ಮೇಲಿನ ವಿಷಯಗಳಲ್ಲಿ ಅನುತ್ತೀರ್ಣರಾದಂತಹ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗುತ್ತದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್ ಎಸ್. ಕೆ. ಪ್ರಕಟಣೆ ಮೂಲಕ ತಿಳಿಸಿದ್ದಾರೆ.













Discussion about this post