ನವದೆಹಲಿ: ಸದಾ ವಿವಾದಗಳಲ್ಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಈಗ ತಮ್ಮ ಹೊಸ ರೀತಿಯ ಪದದಿಂದಾಗಿ ಸುದ್ದಿಯಲ್ಲಿದ್ದಾರೆ.
ಪ್ರಧಾನಿ ಮೋದಿ ಕುರಿತಾಗಿ ಬರೆದಿರುವ ಹೊಸ ಪುಸ್ತಕ The Paradoxical Prime Minister – Narendra Modi and his India ಪುಸ್ತಕದ ಕುರಿತ ಅವರು ಈ 400 ಪುಟಗಳ ಪುಸ್ತಕ ಫ್ರೋಸಿನಿನೂನಿಹಿಲಿಫಿಲಿಫಿಕೇಷನ್ (floccinaucinihilipilification) ಅಭ್ಯಾಸದಂತೆ ಎಂದು ಹೇಳಿರುವುದು ಆಶ್ಚರ್ಯ ಮೂಡಿಸಿದೆ.
My new book, THE PARADOXICAL PRIME MINISTER, is more than just a 400-page exercise in floccinaucinihilipilification. Pre-order it to find out why!https://t.co/yHuCh2GZDM
— Shashi Tharoor (@ShashiTharoor) October 10, 2018
ಇದೊಂದು 18ನೆಯ ಶತಮಾನದ ಲ್ಯಾಟಿನ್ ಪದವಾಗಿದ್ದು, ಬಹುತೇಕ ಇದು ಬಳಕೆಯಲ್ಲಿಯೇ ಇಲ್ಲ. ಆದರೆ, ಇಂತಹ ಪದವನ್ನು ಬಳಕೆ ಮಾಡಿರುವ ಶಶಿ ತರೂರ್ ಅವರ ಕ್ರಮವನ್ನು ಸಾಕಷ್ಟು ಮಂದಿ ಟೀಕಿಸಿದ್ದಾರೆ.
ಇದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ನಿಮ್ಮ ಈ ಪುಸ್ತಕದ ಜೊತೆಯಲ್ಲಿ ಒಂದು ಡಿಕ್ಷನರಿಯನ್ನೂ ಸಹ ಮಾರಾಟ ಮಾಡಿ ಎಂದು ಬಹಳಷ್ಟು ಮಂದಿ ಕುಹಕವಾಡಿದ್ದಾರೆ.
Discussion about this post