ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಯುವಕ ಪಾತ್ರ ಬಹು ಮುಖ್ಯವಾಗಿದ್ದು ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಯ ಹಾದಿಯತ್ತ ಹೆಜ್ಜೆ ಹಾಕಬೇಕು ಎಂದು ಪ್ರಾಚಾರ್ಯರಾದ ಪಿ. ವಿಶ್ವನಾಥ ಅವರು ತಿಳಿಸಿದರು.
ಭವಾನಿ ರಾವ್ ಕೇರಿಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳಾದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ #Vivekananda Jayanti ಅವರು ಮಾತನಾಡಿದರು.
ಹುಟ್ಟುವಾಗ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗಳಾಗಿ ಹುಟ್ಟುತ್ತಾರೆ. ಕಠಿಣ ಪರಿಶ್ರಮ, ಛಲದಿಂದ ತಮ್ಮ ಜೀವನದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಯಾರು ನೀರಿನಲ್ಲಿ ಸ್ನಾನ ಮಾಡುತ್ತಾರೆ ಅಂತಹ ವ್ಯಕ್ತಿಗಳು ಸಾಮಾನ್ಯರಾಗಿಯೇ ಇರುತ್ತಾರೆ. ಯಾರು ಬೆವರಿನಿಂದ ಸ್ನಾನ ಮಾಡುತ್ತಾರೆಯೋ ಅಂತಹ ವ್ಯಕ್ತಿಗಳು ಸಾಧಕರಾಗುತ್ತಾರೆ. ಸಾಧನೆ ಸತತ ಪರಿಶ್ರಮ ಅಗತ್ಯವಿದೆ. ಆದ್ದರಿಂದ ಯುವಕರು ಸಾಧಕರಾಗುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಆಯ್ದುಕೊಂಡು ಅವರಂತೆ ಸಾಧನೆ ಮಾಡುವವರೆಗೂ ಸಾಗುತ್ತಿರಬೇಕು ಎಂದು ವಿವೇಕಾನಂದರ ಜೀವನದ ಮಹತ್ವದ ಘಟನೆಗಳನ್ನು ಸ್ಮರಿಸಿದರು.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶ. ನಮ್ಮ ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ. ಸ್ವಾಮಿ ವಿವೇಕಾನಂದವರ ಪ್ರೇರಣೆಯಿಂದಲೇ ಆಧುನಿಕ ಭಾರತ ನಿರ್ಮಾಣವಾಗುತ್ತಿದೆ ಎಂದರು.
ಇಂದಿನ ಯುವ ಸಮಾಜ ವಿವೇಕಾನಂದರ ಚಿಂತನೆಗಳಾದ ಗುರಿ ಸಾಧನೆಗೆ ಏಕಾಗ್ರತೆ, ಅನಗತ್ಯ ವಿಚಾರಗಳ ಬಗ್ಗೆ ಯೋಚನೆ ಬೇಡ, ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಿ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎನ್ನುವ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಅರುಣ ಮತ್ತು ಉದಯ ವರ್ಗದ ವಿದ್ಯಾರ್ಥಿಗಳು ವಿವೇಕಾನಂದರ ಛದ್ಮವೇಷದಲ್ಲಿ ಕಂಗೊಳಿಸಿದರು.
ವಿದ್ಯಾರ್ಥಿಗಳು ವಿವೇಕಾನಂದರ ನುಡಿಗಳನ್ನು,ಜೀವನದ ಪ್ರಮುಖ ಕಥೆಗಳನ್ನು, ಭಾಷಣ ಮಾಡಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ವರ್ಷ ಮತ್ತು ತಂಡದವರು ಪ್ರಾರ್ಥಿಸಿ, ಸ್ವಾಗತಿಸಿ, ಮಹಾಲಕ್ಷ್ಮಿ ವಂದಿಸಿದರು. ಕವನ ಮತ್ತು ಶ್ರೀಯಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















