ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಉಳ್ಳಿ ಫೌಂಡೇಶನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಫೌಂಡೇಶನ್‌ನ ಅದ್ಯಕ್ಷ ಉಳ್ಳಿ ದರ್ಶನ್ ಮಾತನಾಡಿ, ಈ ಮಹಾಮಾರಿ ಕೊರೋನಾದ ಸಂಕಷ್ಟದ ಸಂಧರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಹಗಲು ರಾತ್ರಿ ಪರಿಸರವನ್ನು ಉಳಿಸಲು ಹೋರಾಡುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.
ಸಮಾಜದ ಸುಂದರ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅರಣ್ಯ ಸಿಬ್ಬಂದಿಗಳನ್ನು ಕೊರೋನಾದಿಂದ ರಕ್ಷಣೆ ಮಾಡುವ ಪ್ರಯುಕ್ತ ಅವರಿಗೆ ಉಳ್ಳಿ ಫೌಂಡೇಶನ್ ವತಿಯಿಂದ ಮಾಸ್ಕ್ ಹಾಗು ಸ್ಯಾನಿಟೈಸರ್ ವಿತರಿಸುತ್ತಿರುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ದಯಾನಂದ ಗಾಮ, ರಾಜು ಉಡುಗಣೆ, ಜುನೈದ್ ಅಫಸರ್, ಸುಹಾಸ್, ಶಶಾಂಕ್ ಕಾಗಿನಲ್ಲಿ, ಸೋಮಶೇಖರ್ ಗೌಡ ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post