ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರತಿಯೊಬ್ಬ ನಾಗರಿಕನು ಸಂಸಾರ ಮತ್ತು ತನಗೆ ಬೇಕಾಗುವಷ್ಟು ಹಣ ಸಂಪಾದನೆ ಮಾಡುತ್ತಾನೆ. ಎಷ್ಟೇ ದುಡಿದರು ನಾವು ಹಣದಿಂದ ಆರೋಗ್ಯವನ್ನು, ಸೌಂದರ್ಯವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕನು ತನ್ನ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡುವುದರ ಮುಖಾಂತರ ಆತ್ಮ ತೃಪ್ತಿ ಹೊಂದಲು ಸಾಧ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷಪ್ಪ ಹೇಳಿದರು.
ರೋಟರಿ ಕ್ಲಬ್ ಶಿಕಾರಿಪುರ ಕದಂಬ ಇಲ್ಲಿ ಗವರ್ನರ್ ಭೇಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯು ಯಾವುದಾದರೂ ಒಂದು ಸಂಘ ಸಂಸ್ಥೆಯಲ್ಲಿ ಸೇರಿಕೊಂಡು ಸಾರ್ವಜನಿಕ ಜೀವನದಲ್ಲಿ ಯುವ ಸಮೂಹ, ಶಾಲಾ ಕಾಲೇಜುಗಳು, ರಕ್ತದಾನ, ರಸ್ತೆಗಳು ಹೀಗೆ ಅನೇಕ ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕಾರಿಪುರದ ಸರ್ಕಾರಿ ಬಾಲಿಕಾ ಪ್ರೌಢಶಾಲೆಗೆ ಎರಡು ಹೊಲಿಗೆ ಯಂತ್ರಗಳನ್ನು ದಾನವಾಗಿ ನೀಡಲಾಯಿತು. ಹಾಗೂ ಆ ಶಾಲೆಗೆ ಪ್ಯಾಡ್ ಬರ್ನಿಂಗ್ ಮಿಷನ್ ನೀಡಲು ಸಹಕಾರ ನೀಡುವುದಾಗಿ ತಿಳಿಸಿದರು.
ಅವರ ಅವಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿರುವುದಾಗಿ ಸಮೀಪದ ಗೌತಮ್ ಪುರ ಸರ್ಕಾರಿ ಶಾಲೆಗೆ ರೋಟರಿ ಸಂಸ್ಥೆಯಿಂದ 42 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಕದಂಬ ರೋಟರಿ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ನಾವು ಶಿಕಾರಿಪುರದಲ್ಲಿ ರಕ್ತದಾನ ಶಿಬಿರಗಳು ಸ್ವಚ್ಛತಾ ಕಾರ್ಯಗಳು ಶಾಲಾ-ಕಾಲೇಜುಗಳಲ್ಲಿ ಸ್ಪರ್ಧೆಗಳ ಏರ್ಪಡಿಸಿ ಬಹುಮಾನ ನೀಡಿರುವುದು ಗಿಡಗಳನ್ನು ನೀಡುವುದರ ಜೊತೆಗೆ ಅದನ್ನು ಪೋಷಣೆ ಮಾಡುವುದು ಹಾಗೂ ಆಯುಧ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳನ್ನು ಉಡುಪಿಯಲ್ಲಿ ನಡೆದ ಯುವ ಜಾಗೃತಿ ಕಾರ್ಯಕ್ರಮಕ್ಕೆ ಕಳುಹಿಸಿ ನಾಯಕತ್ವದ ಕಾರ್ಯಕ್ರಮ ಮಾಡಿರುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ವರದಿಯನ್ನು ಮತ್ತೊರ್ವ ಸದಸ್ಯರಾದ ವೀರೇಂದ್ರ ಅವರು ಜುಲೈ ತಿಂಗಳಿಂದ ನವೆಂಬರ್ ತಿಂಗಳವರೆಗೆ ರೋಟರಿ ಕೈಕೊಂಡ ಅನೇಕ ಕಾರ್ಯಕ್ರಮಗಳ ಜೊತೆಗೆ ರೋಟರಿ ಕುಟುಂಬದ ಪ್ರವಾಸ ಹಾಗೂ ಸಮೂಹ ಊಟದ ಕಾರ್ಯಕ್ರಮದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಸುರೇಶ್ ಹಾಗೂ ಜಾನಪದ ಕಲಾವಿದರಾದ ಪರಶುರಾಮ್ ಚೌಟಗಿ, ಅಂಬಾರ್ ಗೊಪ್ಪ ಅಂತರಾಷ್ಟ್ರೀಯ ಕುಸ್ತಿ ವಿಜೇತ ಪಂಜಾ ಕುಸ್ತಿಯ ಕುಸ್ತಿಪಟು ಗೌರಮ್ಮ, ಹಾಗೂ ಭರತನಾಟ್ಯ ಕಲಾವಿದೆ ಸತತವಾಗಿ ರೋಟರಿಯಲ್ಲಿ ಪ್ರಶಸ್ತಿ ಗಳಿಸುತ್ತಿರುವ ಮೈತ್ರಿ ಶಾಲೆಯ ಕುಮಾರಿ ಪ್ರಣತಿ ವಿ ಇವರಿಗೆ ಸನ್ಮಾನಿಸಲಾಯಿತು,
ಈ ಕಾರ್ಯಕ್ರಮದಲ್ಲಿ ರೇಖಾ ಪಾಲಕ್ಷ, ಕೆ, ಅಸಿಸ್ಟೆಂಟ್ ಗವರ್ನರ್ ಕೆ,ಪಿ ಶೆಟ್ಟಿಯವರು, ಜೋನಲ್ ಲೆಫ್ಟಿನೆಂಟ್ ಶಂಕರ್, ಚಾರ್ಟಡ್ ಪ್ರೆಸಿಡೆಂಟ್ ರಘು ಎಂ,ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಮೂರ್ತಿಯವರು ಸ್ವಾಗತಿಸಿ, ಕುಮಾರಿ ಆರ್ಯವಂಶಿಕ ಪ್ರಾರ್ಥಿಸಿ,
ಡಾ. ವೀರೇಂದ್ರ ವಂದಿಸಿ, ಮಧುಸೂದನ್ ನಿರೂಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















