ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಅಗತ್ಯ ಈ ನಿಟ್ಟಿನಲ್ಲಿ ಎಲ್ಲರೂ ಮೊದಲು ಚಿಂತನೆ ನಡೆಸಬೇಕು ಎಂದು ಮೈತ್ರಿಶಾಲೆ ಆಡಳಿತಾಧಿಕಾರಿ ಕೆ.ಆರ್. ದಯಾನಂದ ಹೇಳಿದರು.
ಪಟ್ಟಣದ ಮೈತ್ರಿ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ನಿತ್ಯ ಸೇವಿಸುವ ಆಹಾರದಲ್ಲಿ ಪ್ರೋಟಿನ್, ವಿಟಮಿನ್, ಖನಿಜಾಂಶ, ನೀರು ಸಮ ಪ್ರಮಾಣದಲ್ಲಿ ಸೇವಿಸಬೇಕು. ಹಸಿರು ಸೊಪ್ಪು, ತರಕಾರಿ, ಹಣ್ಣು, ಬೇಳೆಕಾಳು, ಮೊಳಕೆ ಕಾಳು, ಹಾಲು, ಸಿರಿಧಾನ್ಯದಲ್ಲಿ ಈ ಅಂಶಗಳು ಇರುತ್ತವೆ. ಫಾಸ್ಟ್‌ಫುಡ್ ಬಾಯಿಗೆ ರುಚಿ ಅನಿಸುತ್ತದೆ ಅದಕ್ಕಾಗಿ ಮಾರಕ ಕೆಮಿಕಲ್ ಹಾಕಲಾಗಿರುತ್ತೆ ಹೆಚ್ಚಿನ ಮಕ್ಕಳು ಅಂತಹ ಆಹಾರದ ಮೇಲೆ ಅವಲಂಬಿತರಾಗಿದ್ದು ಪೌಷ್ಠಿಕತೆ ಕೊರತೆಯಿಂದ ಬಳಲುತ್ತಿರುವುದು ಹೆಚ್ಚಾಗಿದೆ ಅದನ್ನು ಹೋಗಲಾಡಿಸುವಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಸಹಕಾರಿ ಆಗಲಿ ಎಂದರು.
ರಾಸಾಯನಿಕ ಹಾಕದೆ ಸೊಪ್ಪು ತರಕಾರಿ ಬೆಳೆಯಬೇಕು ಮಕ್ಕಳಿಗೂ ಬೆಳೆ ಬೆಳೆಯುವ ಕಲೆ ಕಲಿಸಬೇಕು. ಕಾಳು, ಬೇಳೆ, ಹಣ್ಣು, ತರಕಾರಿ ಪ್ರದರ್ಶನ, ರಸಪ್ರಶ್ನೆ ಕಾರ್‍ಯಕ್ರಮ ಆಯೋಜಿಸಲಾಗಿತ್ತು. ಮುಖ್ಯೋಪಾಧ್ಯಾಯ ವಿಶ್ವನಾಥ್, ಪ್ರಶಾಂತ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post