ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಒತ್ತಡ ರಹಿತ ಕಲಿಕೆಗೆ ಪೂರಕವಾಗಿವೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ. ಎಸ್ ಶಿವಕುಮಾರ್ ಹೇಳಿದರು.
ಮಂಗಳವಾರ ಪಟ್ಟಣದ ಕೇಂದ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ಕುಮದ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದ ಪ್ರಮುಖ ಅಂಗಗಳಾಗಿವೆ. ಇವು ದೈಹಿಕ ಮತ್ತು ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅಗತ್ಯವಾಗಿ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಯುವಜನರನ್ನು ಸಮಾಜದ ಸಕ್ರಿಯ ಭಾಗವಿಸುಗರನ್ನಾಗಿ ರೂಪಿಸಿ ಒಟ್ಟಾಗಿ ಕೆಲಸ ಮಾಡಲು ಕಾಲೇಜು ಹಂತದಲ್ಲಿ ಸಮಗ್ರವಾಗಿ ಅಳವಡಿಸಿಕೊಳ್ಳಬೇಕು ಏಕೆಂದರೆ ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಕ್ರೀಡೆಯಿಂದ ಕೂಡಿದ ಜೀವನ ಸಿಹಿಯಾದ ಹಾಲು ಜೇನಿನಂತೆ ಎಂದು ಅವರು ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಮಾತನಾಡಿದರು.
ಮತ್ತೋರ್ವ ಅತಿಥಿ ಪ್ರಾಚಾರ್ಯ ವಿಶ್ವನಾಥ್ ಹೆಚ್ ಮಾತನಾಡಿ, ಯಾರು ಸೋಲು ಗೆಲುವುಗಳನ್ನು ಹುಟ್ಟುವಾಗಲೇ ಪಡೆದಿರುವುದಿಲ್ಲ ನಮ್ಮ ಕೆಲಸಗಳು ಅವುಗಳನ್ನು ನಿರ್ಧರಿಸುತ್ತವೆ ಪ್ರತಿ ಕೆಲಸದ ಹಿಂದೆ ಪ್ರಾಮಾಣಿಕ ಪರಿಶ್ರಮವಿರಲಿ ಎಂದು ಮಕ್ಕಳಿಗೆ ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎಂ. ವೀರೇಂದ್ರ ಮಾತನಾಡಿ ಕಠಿಣ ಪರಿಶ್ರಮ, ಸಂಕಲ್ಪ ಬಲ, ಮತ್ತು ಅಪರ್ಣ ಮನೋಭಾವ ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಸಾಧನೆಗೆ ಮೇರೆಗಳೆ ಇರುವುದಿಲ್ಲ ಎಂದು ಹೇಳಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವಿಜ್ ಅಹ್ಮದ್ ನಡೆಸಿಕೊಟ್ಟರು.
ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ಅನುಷ್ಕಾ ನಾಡಿಕ್ ಸಂಗಡಿಗರು, ಉಪನ್ಯಾಸಕ ದೇವರಾಜ್ ಸ್ವಾಗತಿಸಿ, ಕುಮಾರಿ ಚೈತ್ರ ಜಿಕೆ ಹೊಂದಿಸಿ ಶಿವರಾಜ್ ಜಿ ನಿರೂಪಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ .ಎಂ. ಬಿ ಶಿವಕುಮಾರ್, ಆಡಳಿತ ಪ್ರತಿನಿಧಿಗಳು ಹಾಗೂ ಪ್ರಾಚಾರ್ಯರಾದ ಡಾ. ಜಿ ಎಸ್.ಶಿವಕುಮಾರ್, ಡಾ.ಎಂ. ವೀರೇಂದ್ರ, ಹೆಚ್ ವಿಶ್ವನಾಥ, ಪ್ರಶಾಂತ್. ಎಚ್. ಡಿ ಪರ್ವಿಜ್ ಅಹ್ಮದ್, ಚಂದ್ರಶೇಖರ್ ಶಿವರಾಜ್ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















