ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಅದು ಹೆಸರಿಗೆ ಸರ್ಕಾರಿ ಶಾಲೆ. ಆದರೆ, ಈಗ ಅತ್ಯಾಧುನಿಕ ಸ್ಪರ್ಶದೊಂದಿಗೆ ಯಾವುದೇ ಖಾಸಗೀ ಶಾಲೆಗೆ ಕಡಿಮೆಯಿಲ್ಲದಂತೆ ಬದಲಾಗಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.
ಹೌದು ಶಿಕಾರಿಪುರ #Shikaripura ಪಟ್ಟಣದ ಶಾಲೆ ಸರ್ಕಾರಿ #GovernmentSchool ಹಿರಿಯ ಹೆಣ್ಣು ಮಕ್ಕಳ ಶಾಲೆಗೆ(ಸಿದ್ಧಲಿಂಗೇಶ್ವರ) ಬಂತು ಸ್ಮಾರ್ಟ್ ಬೋರ್ಡ್, ಸಿಸಿಟಿವಿ, ವಿದ್ಯಾರ್ಥಿಗಳಿಗೆ ಲೋಟ ತಟ್ಟೆ, ಸ್ಮಾರ್ಟ್ ಟಿವಿ #SmartTV ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಅವಶ್ಯಕವಾಗಿರುವ ಪರಿಕರಗಳನ್ನು ಒದಗಿಸಿ ಸರ್ಕಾರಿ ಶಾಲೆಯೂ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಓದಿ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯ ಪಡೆದುಕೊಂಡರು. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುವ ಈ ಕಾಲದಲ್ಲಿ ಸರ್ಕಾರಿ ಶಾಲೆಯನ್ನು ಉನ್ನತಿಕರಣ ಮಾಡಬೇಕು ಎಂದು ಒಂದಿಷ್ಟು ಸಮಾನ ಮನಸ್ಕ ತಂಡ ಪಕ್ಷಾತೀತವಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸೇವಾ ಕೈಂಕರ್ಯದಲ್ಲಿ ಮುಂದಾಗಿದೆ.

Also read: ಮಾಡುವ ಕೆಲಸದಲ್ಲಿ ವಿಭಿನ್ನತೆ ಇದ್ದರೆ ಜಯ ಸುಲಭ ಸಾಧ್ಯ: ವಿನಾಯಕ ನಾಯ್ಕ್ ಅಭಿಪ್ರಾಯ
ಪ್ರತಿಯೊಬ್ಬರು ತಾವು ಓದಿದ ಶಾಲೆಗಳಿಗೆ ತಮ್ಮ ಶಕ್ತಿ ಅನುಸಾರ ಆಗುವ ಸಹಕಾರ ನೀಡಿ, ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಾಗಿಸುವ ಪ್ರಯತ್ನ ಮಾಡಬೇಕು. ಸರ್ಕಾರಿ ಶಾಲೆ ದೇಣಿಗೆ ನೀಡಿ ಶಾಲೆಗಳ ಅಭಿವೃದ್ಧಿಗಾಗಿ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಅದಕ್ಕೂ ಮೊದಲೇ ಶಿಕಾರಿಪುರ 100 ಕ್ಕೂ ಹೆಚ್ಚು ಸದೃದಯಿ ದಾನಿಗಳು 2.27 ಲಕ್ಷ ರೂ. ನಿಧಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿಸಿ ಉತ್ತಮ ಶಿಕ್ಷಣ ಸರ್ಕಾರಿ ಶಾಲೆ ಮಕ್ಕಳಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಪುಣ್ಯ ಕಾರ್ಯದಲ್ಲಿ ಕೈಂಕರ್ಯದಲ್ಲಿ ಯುವಕರ ತಂಡ ತೊಡಗಿದೆ ಎಂದರು ತಪ್ಪಾಗಲಾರದು.
ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ದಾನಿಗಳ ಸಹಕಾರದಿಂದ ಈಗಾಗಲೇ ಶಾಲೆಯಲ್ಲಿ ಎಲ್’ಕೆಜಿ #LKG ಮತ್ತು ಯುಕೆಜಿ #UKG ತರಗತಿಗಳನ್ನು ಸಹ ಆರಂಭಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಶರತ್, ಎಸ್’ಡಿಎಂಸಿ ಅಧ್ಯಕ್ಷರು ಸಿ. ನಾಗರಾಜಪ್ಪ, ಎಸ್’ಡಿಎಂಸಿ ಗೌರವಾಧ್ಯಕ್ಷರಾದ ಇಮ್ರಾನ್, ಉಪಾಧ್ಯಕ್ಷೆ ಸಹನ, ಪತ್ರಕರ್ತರಾದ ಎ.ಓ. ಹೆಬ್ಬಾರ್, ಬಾಪೂಜಿ ಸಂಸ್ಥೆ ಸಂಸ್ಥಾಪಕರಾದ ಪಾಪಯ್ಯ, ಮುಖ್ಯ ಶಿಕ್ಷಕ ಎಂ.ಕೆ. ಜಬಿವುಲ್ಲಾ, ದಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post