ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಹಿಂದೂ ಸಂಸ್ಕೃತಿಯಲ್ಲಿ ಗುರು ಪೂರ್ಣಿಮೆ ಬಹಳ ಮುಖ್ಯ ಮತ್ತು ಪವಿತ್ರ ಹಬ್ಬವಾಗಿದೆ. ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು #Gurupoornime ಆಚರಿಸಲಾಗುತ್ತದೆ, ಇದನ್ನು ಆಷಾಢ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಗುರು ಪೂರ್ಣಿಮೆಯನ್ನು “ವ್ಯಾಸ ಪೂರ್ಣಿಮೆ” ಎಂದೂ ಕರೆಯುತ್ತಾರೆ.ಎಂದು ಶಾಲಾ ಸಂಚಾಲನ ಸಮಿತಿಯ ಸದಸ್ಯ ಪಿ.ಎನ್. ವಿಶ್ವನಾಥ್ ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆಯ ಬೌದ್ಧಿಕ ಪ್ರಮುಖರಾಗಿ ಮಾತನಾಡಿದರು.
ಸುಲಭ ತಿಳುವಳಿಕೆಗಾಗಿ ಮಹರ್ಷಿ ವೇದವ್ಯಾಸರು ಒಂದೇ ವೇದವನ್ನು 4 ವೇದಗಳಾಗಿ ವಿಂಗಡಿಸಿದ್ದಾರೆ ಮತ್ತು ವೇದಗಳಿಗೆ ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡಲಾಗಿರುವುದರಿಂದ, ಅವರ ಕೆಲಸವನ್ನು ಗೌರವಿಸಲು, ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ ಎಂದರು.
ವೇದವ್ಯಾಸರನ್ನು ಆದಿ ಗುರು ಎಂದೂ ಪರಿಗಣಿಸಲಾಗುತ್ತದೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಗೆ ಅವರ ಕೊಡುಗೆ ಅಪಾರ. ಗುರು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಗುರುಗಳಿಂದಾಗಿಯೇ ನಾವು ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಗುರು ಅಥವಾ ಶಿಕ್ಷಕರು ನಮ್ಮನ್ನು ನಮ್ಮ ಅತ್ಯುತ್ತಮ ಆವೃತ್ತಿಯಾಗಿರಲು ಮಾರ್ಗದರ್ಶನ ನೀಡುತ್ತಾರೆ. ಗುರುವಿಲ್ಲದೆ ನಮ್ಮ ಗುರಿಯನ್ನು ತಲುಪುವುದು ತುಂಬಾ ಕಷ್ಟ. ನಮ್ಮ ಜೀವನ ಪ್ರಯಾಣದಲ್ಲಿ ನಮಗೆ ಸಹಾಯ ಮಾಡಿದ, ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳನ್ನು ನಾವು ನೆನಪಿಸಿಕೊಳ್ಳಬೇಕಾದ ದಿನ ಇದು. ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ ಇದು ಎಂದರು.
ಪೋಷಕರು ನಮ್ಮ ಮೊದಲ ಗುರುಗಳು. ನಮ್ಮ ಜೀವನದಲ್ಲಿ ಶಾಶ್ವತವಾಗಿರುವ ನಡೆಯುವುದು, ತಿನ್ನುವುದು, ಮಾತನಾಡುವುದು ಮುಂತಾದ ಮೂಲಭೂತ ವಿಷಯಗಳನ್ನು ನಮಗೆ ಕಲಿಸುವವರು ತಾಯಿ ಮತ್ತು ತಂದೆ. ನಾವು ನಮ್ಮ ಹೆತ್ತವರನ್ನು ಗುರುಗಳಾಗಿ ಗೌರವಿಸಬೇಕು ಏಕೆಂದರೆ ನಾವು ಇಂದು ಕಲಿತ ಯಾವುದೇ ಒಳ್ಳೆಯ ವಿಷಯಗಳು ನಮ್ಮ ಹೆತ್ತವರ ಕಾರಣದಿಂದಾಗಿ. ಹಿಂದೂ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯು ಬಹಳ ಸನಾತನ ಸಂಪ್ರದಾಯವಾಗಿದೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮನೆಯನ್ನು ತೊರೆದು ಗುರುಕುಲದಲ್ಲಿ ಜೀವನ ಪಾಠಗಳನ್ನು ಕಲಿಯುತ್ತಿದ್ದರು. ವಿದ್ಯಾರ್ಥಿಗಳು ಗುರುಕುಲ ಮತ್ತು ಇತರ ವಿಷಯಗಳಲ್ಲಿ ಜೀವನ ಪಾಠಗಳನ್ನು ಕಲಿಯುತ್ತಿದ್ದರು. ಈ ಜೀವನ ಪಾಠಗಳು ಅವರ ಜೀವನದಲ್ಲಿ ಧರ್ಮನಿಷ್ಠೆಯಿಂದ ಬದುಕಲು ಸಹಾಯ ಮಾಡುತ್ತವೆ ಎಂದರು.
ಗುರು-ಶಿಷ್ಯ ಸಂಬಂಧವು ಬಹಳ ಬಲವಾದ ಮತ್ತು ಶುದ್ಧ ಸಂಬಂಧವಾಗಿದೆ. ಗುರುವನ್ನು ಬಹಳ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ರಾಜರೂ ಕೂಡ ತಮ್ಮ ಗುರುಗಳನ್ನು ನೋಡಿದಾಗ, ಅವರು ನಮಸ್ಕರಿಸಿ ಗೌರವ ಸಲ್ಲಿಸುತ್ತಾರೆ. ಇದು ನಾವು ನಮ್ಮ ಗುರುಗಳಿಗೆ ನೀಡುವ ಗೌರವಾಗಿದೆ. ಗುರು ಶಿಷ್ಯರ ಸಂಬಂಧ ತಿಳಿಸುವ ದ್ರೋಣಾಚಾರ್ಯರು ಮತ್ತು ಏಕಲವ್ಯ , ಮಹಾಭಾರತದ ಕೌರವರ ಮತ್ತು ಪಾಂಡವರ ಕಥೆಗಳನ್ನು ಹೇಳುವುದರ ಮೂಲಕ ಗುರುವಿನ ಸ್ಥಾನ ಮತ್ತು ಸಮರ್ಪಣೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಶ್ರೀ ಯುತ ವಿಶ್ವನಾಥ.ಪಿ ರವರುಜೀವನ ಎಂಬ ಈ ಭವ ಸಾಗರವನ್ನು ದಾಟಿಸುವವನೇ ಗುರು. ಆದ್ದರಿಂದ ಉಸಿರು ಇರುವವರೆಗೆ ಗುರುವಿನ ಸ್ಮರಣೆ ಮಾಡುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಹೊಂದಬೇಕು. ಜೀವನ ಎಂಬ ಈ ಭವ ಸಾಗರವನ್ನು ದಾಟಿಸುವವನೇ ಗುರು. ಆದ್ದರಿಂದ ಉಸಿರು ಇರುವವರೆಗೆ ಗುರುವಿನ ಸ್ಮರಣೆ ಮಾಡುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಹೊಂದಬೇಕು. ಉಸಿರು ಇರುವವರೆಗೆ ಗುರು ಸ್ಮರಣೆ ಮಾಡಿ ದೇವರನ್ನು, ಗುರುವನ್ನು ಸದಾ ಸ್ಮರಿಸಬೇಕು. ಜೀವನದಲ್ಲಿ ಸನ್ಮಾರ್ಗ ಹೊಂದಬೇಕು ಎಂದರು.
ಸಂಸಾರ ಎಂಬ ನದಿಯಲ್ಲಿ ಈಜುತ್ತಿದ್ದೇವೆ. ಗುರುವಿನ ನಾಮಸ್ಮರಣೆ ಮಾಡುವ ಮೂಲಕ ದಡ ಸೇರಬೇಕು. ಜೀವನ ಎಂದರೆ ಅದರಲ್ಲಿ ಸುಖ-ದುಃಖ, ಮಾನ-ಅಪಮಾನ, ಕಷ್ಟ-ಕಾರ್ಪಣ್ಯಗಳು, ಜಂಜಡಗಳು ಇರುತ್ತವೆ. ಗುರು ನಾಮಸ್ಮರಣೆ ಮಾಡುವುದರಿಂದ ಗುರು ನಮಗೆ ಮಾರ್ಗದರ್ಶನ ನೀಡುತ್ತಾನೆ. ಆ ಮೂಲಕ ನಾವು ಸಮಾಜದಲ್ಲಿ ಧರ್ಮದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ದೇವರು ಮುನಿದರೂ ಗುರು ಕಾಯುತ್ತಾನೆ. ಗುರು ತಾಯಿ ಸ್ಥಾನದಲ್ಲಿ ನಿಂತು ಸುಜ್ಞಾನವನ್ನು, ಸಂಸ್ಕಾರವನ್ನು ನೀಡುತ್ತಾನೆ. ಮನಪರಿವರ್ತಿಸಿ ಶರಣ ಮಾರ್ಗದರ್ಶನದ ಕಡೆಗೆ ಕೊಂಡೊಯ್ಯುತ್ತಾನೆ. ಅಜ್ಞಾನ ಮಾಯೆ ಇದ್ದಂತೆ. ಬೇಕು ಬೇಕು ಎನ್ನುವ ಬೇಡಿಕೆಗಳಿಗೆ ನಮ್ಮಷ್ಟಕ್ಕೆ ನಾವೇ ಕಡಿವಾಣ ಹಾಕಿಕೊಳ್ಳಬೇಕು ಎಂದು ತಿಳಿಸಿದರು. ಕು. ವಶಿಷ್ಠ ಭಗವಧ್ವಜಕ್ಕೆ ಗುರು ವಂದನೆ ಸಲ್ಲಿಸಿದನು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ಲೋಕ , ಅಮೃತ ಬಿಂದು, ಅಮೃತ ವಚನ,ಕಗ್ಗ,ದೋಹಾಗಳನ್ನು ಹೇಳಿದರು.ಗುರುಗಳನ್ನು ಗೌರವಿಸುವ ಹಾಡುಗಳನ್ನು ಹಾಡಿ, ನೃತ್ಯಗಳನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ,ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚಿತ್ರಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿ,ಕುಶಾಲ್ ಸ್ವಾಗತಿಸಿ,ಧನುಷ್ ವಂದಿಸಿ ಸಹನಾ ಮತ್ತು ಲಿಖಿತ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post