ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಷ್ಟ್ರೀಯ ಯುವ ದಿನ #NationalYouthDay ಪ್ರತಿಯೊಬ್ಬ ಭಾರತೀಯ ಯುವಕರಿಗೆ ಮಹಾನ್ ಸ್ಫೂರ್ತಿಯ ದಿನವಾಗಿದ್ದು, ಒಬ್ಬ ವಿವೇಕಾನಂದರು ಗತಿಸಿಹೋದ ನೂರು ವರ್ಷಗಳ ನಂತರವೂ ಆತನ ಹೆಸರು ಹೇಳಿದರೆ ಜನರ ಮನಸ್ಸಿನಲ್ಲಿ ವಿದ್ಯುತ ಸಂಚಾರವಾದಂತಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು, ಸಂಸದ ಬಿ.ವೈ. ರಾಘವೇಂದ್ರ #BYRaghavendra ಅಭಿಪ್ರಾಯಪಟ್ಟರು.
ಶಿಕಾರಿಪುರ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Also Read>> ಸೊರಬ | ಭೀಕರ ಅಪಘಾತ | ಮೂವರ ದುರ್ಮರಣ | ನಾಲ್ವರಿಗೆ ಗಂಭೀರ ಗಾಯ
ಒಬ್ಬ ವಿವೇಕಾನಂದರು #SawmyVivekananda ಗತಿಸಿಹೋದ ನೂರು ವರ್ಷಗಳ ನಂತರವೂ ಆತನ ಹೆಸರು ಹೇಳಿದರೆ ಜನರ ಮನಸ್ಸಿನಲ್ಲಿ ವಿದ್ಯುತ ಸಂಚಾರವಾದಂತಾಗುತ್ತದೆ ಎಂದಾದರೆ ಆತನೇ ನಿಜವಾದ ಮಹಾನ್ ವ್ಯಕ್ತಿ. ಇಂತಹವರ ಸಾಲಿನಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುವವರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು ಎಂದರು.
ಯುವ #Youth ಸಮೂಹ ಪ್ರತಿಯೊಂದು ರಾಷ್ಟ್ರದ ದಿವ್ಯ ಸಂಪತ್ತು. ದೇಶದ ಪ್ರೇರಕ ಶಕ್ತಿ. ಯುವ ಸಮೂಹದ ಶಕ್ತಿ, ಸಾಮರ್ಥ್ಯಗಳು ಒಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಯುವಶಕ್ತಿಯ ನಿರ್ವಿವಾದ ಸಂಕೇತವಾಗಿ ಬೆಳೆದ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಇಂದಿನ ಯುವಕರಿಗೆ ಮಾದರಿಯಾಗಿದೆ. ಭಾರತ ಇಂದು ಜಗತ್ತಿನಲ್ಲಿ ನಮ್ಮದೇ ಆದ ಸಾಧನೆಯ ಮೂಲಕ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆ ಸಂಗತಿ. ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಯುವಕರ ಪಾತ್ರ ಹಿರಿದಾಗಿದೆ ಎಂದರು.
Also Read>> ಹಿರಿಯ ನಟ ಸರಿಗಮ ವಿಜಯ್ ವಿಧಿವಶ | ಅಂತಿಮ ದರ್ಶನ ಎಲ್ಲಿ?
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಡಾ. ಶಿವಕುಮಾರ್ ಜಿ.ಎಸ್. ಮಾತನಾಡಿ, ಭಾರತದ ಯೂತ್ ಐಕಾನ್ ಶ್ರೀ ಸ್ವಾಮಿ ವಿವೇಕಾನಂದರು. ಅವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಿವೆ. ಯುವಜನರು ಸ್ವಯಂ ಶಿಸ್ತು, ಜವಾಬ್ದಾರಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಂತಹ ಗುಣಗಳನ್ನು ಬೆಳಸಿಕೊಂಡು, ದೇಶವನ್ನು ಕಟ್ಟುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಪ್ರಾಚಾರ್ಯರಾದ ಡಾ.ರವೀಂದ್ರ ಕೆ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ದಿಷಾ ಭಟ್, ವರುಣ್, ಮೆಹನ್ಜ್ ಮೆಹಕ್, ವರ್ಷಿತಾ, ಕಲ್ಪನಾರವರು ಕಿರುಭಾಷಣ ಮಾಡಿದರು.
ಸ್ವಾಮಿ ವಿವೇಕಾನಂದ ಜಯಂತಿ ಸಪ್ತಾಹದ ಅಂಗವಾಗಿ ಅಂಗ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳಿಂದ ಚಾಗಿಯ ಹಾಡುಗಳು, ಕಿರು ಭಾಷಣ, ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರ ಪ್ರದರ್ಶನ, ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಕೆ. ಕುಬೇರಪ್ಪ, ಪ್ರಾಚಾರ್ಯರುಗಳಾದ ಡಾ.ಎಂ. ವೀರೇಂದ್ರ, ಎಚ್.ಜಿ. ಸಿದ್ದೇಶ್ವರ, ವಿದ್ಯಾಶಂಕರ್, ವಿಶ್ವನಾಥ್, ಪ್ರಶಾಂತ್ ಕುಬಸದ್, ಎಚ್.ಡಿ. ಪ್ರಶಾಂತ ಹಾಗೂ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕ ವರ್ಗವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕಿಯರಾದ ಧಾನೇಶ್ವರಿ ಸ್ವಾಗತಿಸಿದರು. ಅಶ್ವಿನಿ ವಂದಿಸಿ, ಹಂಸ ಅವರು ನಿರೂಪಿಸಿದರು.
(ವರದಿ ಮಾಹಿತಿ: ಆರ್. ಕೋಟೋಜಿರಾವ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post