ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ವಿವಿಧ ಬಗೆಯ ಹಾಲು ಕರೆಯುವ ವಿಧಾನಗಳು ಎಂಬ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಾಲು ಕರೆಯುವ ವಿಧಾನಗಳು ಮತ್ತು ಅದರ ಉಪಯೋಗಗಳು ಹಾಗೂ ಹಾಲು ಕರೆಯುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಎರಡು ಮುಖ್ಯ ಕೈ ಹಾಲು ಕರೆಯುವ ವಿಧಾನಗಳು: ಸ್ಟ್ರೀಪ್ಪಿಂಗ್ ಮತ್ತು ಪೂರ್ಣ ಕೈ ವಿಧಾನ.
Also read: ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಮೇಲಾಗುವ ಪರಿಣಾಮವೇನು?
ಸ್ಟ್ರೀಪ್ಪಿಂಗ್: ಹೆಬ್ಬೆರಳು ಮತ್ತು ತೋರುಬೆರಳಿನಿಂದ ಮೇಲಿನಿಂದ ಕೆಳಕ್ಕೆ ಮೊಲೆ ಅನ್ನು ಹಿಸುಕುವುದು.
ಪೂರ್ಣ ಕೈ: ಮೊಲೆ ಅನ್ನು ಎಲ್ಲಾ ಐದು ಬೆರಳುಗಳಿಂದ ಹಿಡಿದು ಅಂಗೈಗೆ ಒತ್ತಲಾಗುತ್ತದೆ.
ಸ್ಟ್ರೀಪ್ಪಿಂಗ್:
- ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಮೊಲೆಯನ್ನು ಹಿಡಿದುಕೊಳ್ಳಿ.
- ಮೊಲೆಯ ಮೇಲ್ಭಾಗದಿಂದ ಪ್ರಾರಂಭಿಸಿ, ಅದನ್ನು ಕೆಳಕ್ಕೆ ಹಿಸುಕಬೇಕು.
- ಹೀಗೆ ಎಲ್ಲ ಮೊಲೆ ಇಂದ ಮಾಡಿ ಹಾಲು ಕರೆಯಬೇಕು.
ಪೂರ್ಣ ಕೈ:
- ಎಲ್ಲಾ ಐದು ಬೆರಳುಗಳಿಂದ ಮೊಲೆಯನ್ನು ಹಿಡಿದುಕೊಳ್ಳಿ.
- ನಿಮ್ಮ ಅಂಗೈ ವಿರುದ್ಧ ಮೊಲೆಯನ್ನು ಒತ್ತಿರಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post