ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಶಿರಾಳಕೊಪ್ಪ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ.
ಕಳೆದ 25 ವರ್ಷಗಳಿಂದ ಸುದೀರ್ಘ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗ ವಾಗಿದ್ದು ಬಿಜೆಪಿಯ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ, #B Y Vijayendra ಸಂಸದ ಬಿ ವೈ ರಾಘವೇಂದ್ರ, #B Y Raghavendra ಅವರಿಗೆ ಸಕ್ಷೇತ್ರದಲ್ಲೇ ಬಾರಿ ಮುಖಭಂಗವಾಗಿದೆ.
ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ಪಿ ನಾಗರಾಜ್ ಗೌಡ ಅವರ ನೇತೃತ್ವದಲ್ಲಿ ಈ ಬಾರಿ ಶಿರಾಳಕೊಪ್ಪ ಪುರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 17 ಜನ ಸದಸ್ಯರ ಬಲಇರುವ. ಪುರಸಬೇ ಕಳೆ ಬಾರಿ ಬಿಜೆಪಿ ಅಧಿಕಾರದಲ್ಲಿ ಇತ್ತು ಎರಡನೇ ಅವಧಿಗೆ ಕಾಂಗ್ರೇಸ್ ಗೆ 11 ಜನ ಸದಸ್ಯರ ಬಲದಿಂದ ಅಧಿಕಾರ ಹಿಡಿದಿದೆ.
ನೂತನ ಅಧ್ಯಕ್ಷರಾಗಿ ಮಮತಾ ನಿಂಗಪ್ಪ ಉಪಾಧ್ಯಕ್ಷರಾಗಿ ಮುದಾಸಿರ್ ಅಹಮದ್ ಅವಿರೋಧ ಆಯ್ಕೆಯಾಗಿದ್ದಾರೆ.
Also read: ಭದ್ರಾವತಿ ಶಾಸಕರ ಪುತ್ರ ಬಸವೇಶ್ ಹತ್ಯೆಗೆ ಸ್ಕೆಚ್ | ಎಫ್‌ಐಆರ್ ದಾಖಲು | ಡೀಲ್ ಕೊಟ್ಟಿದ್ದು ಯಾರು?
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್ಪಿ ನಾಗರಾಜ ಗೌಡ ತಾಲೂಕು ಅಧ್ಯಕ್ಷರು ಶಿರಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಪಟಾಕಿಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post