ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕ್ಷೇತ್ರದಲ್ಲಿ ಕಾಟಾಚಾರಕ್ಕೆ ಎಂಪಿ ಆದರೆ ಸಾಲದು. ಬದಲಾಗಿ, ಜನರಿಗಾಗಿ ಇಲ್ಲಿ ಕೆಲಸ ಮಾಡಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ #Hatrik Hero Shivarajkumar ಹೇಳಿದರು.
ಹಿತ್ತಲ ಗ್ರಾಮದಲ್ಲಿ ಮಾತನಾಡಿದ ಅವರು, ಕಾಟಚಾರಕ್ಕೆ `ಎಂಪಿ’ ಅನಿಸಿಕೊಂಡರೆ ಸಾಲದು. ಇಲ್ಲಿ ಕೆಲಸ ಮಾಡಬೇಕು. ಜನ ಸಾಮಾನ್ಯರಿಗೆ ಸೇವೆ ಒದಗಿಸಬೇಕು. ಅದು ಆಗದೇ ಇದ್ದಾಗ, ಉತ್ತಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆದ್ದರಿಂದ, ಗೀತಾಗೆ ಬೆಂಬಲಿಸಿ ಎಂದರು.

Also read: ಲೋಕಸಭಾ ಚುನಾವಣೆ | ಸಿಟಿ ಸೆಂಟರ್ ಮಾಲ್’ನಲ್ಲಿ ಗಮನ ಸೆಳೆಯುತ್ತಿದೆ ಚುನಾವಣೆ ಮಾಡೆಲ್
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಬಿಜೆಪಿ ಪಕ್ಷದವರು ಪ್ರಧಾನಿ ಮೋದಿಯ ಮುಖವಾಡ ಧರಿಸಿ ಮತಯಾಚನೆಗೆ ಮುಂದಾಗಿದ್ದಾರೆ. ಆದರೆ, ಇಲ್ಲಿ ಬಡವರ ಬದುಕಿಗೆ ದಾರಿ ದೀಪವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದರ ಸದ್ದಡುಗಿಸಬೇಕು ಎಂದರೆ, ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post