ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
“ರಾಷ್ಟ್ರೀಯ ಸೇವಾ ಯೋಜನೆಯ #NationalServiceScheme ವಿಶೇಷ ಶಿಬಿರದ ದೀಪೋತ್ಸವವು ಜ್ಞಾನ, ಸೇವೆ ಮತ್ತು ಶಿಸ್ತಿನ ಸಂಕೇತವಾಗಿದೆ. ಗಾಂಧೀಜಿಯವರ ಸರ್ವೋದಯ ತತ್ವದಡಿಯಲ್ಲಿ, ಶಿಬಿರದಲ್ಲಿ ದೀಪ ಬೆಳಗುವ ಮೂಲಕ ಸ್ವಯಂಸೇವಕರು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಾರೆ” ಎಂದು #KuvempuUniversity ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾದ ಡಾ. ಶುಭಾ ಮರವಂತೆ ಹೇಳಿದರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮುದ್ದೇನಹಳ್ಳಿಯಲ್ಲಿ ಆಯೋಜಿಸಿದ 11ನೇ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ ಹಾಗೂ ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಮುಂದಿನ ವರ್ಷ ಕುಮದ್ವತಿ ಪದವಿ ವಿಭಾಗಕ್ಕೆ ಇನ್ನೊಂದು ಘಟಕವನ್ನು ನೀಡಲು ನಾವು ಸಿದ್ಧರಿದ್ದೇವೆ. ಜೊತೆಗೆ ಇಲ್ಲಿನ ಒಬ್ಬ ಸ್ವಯಂ ಸೇವಕರನ್ನು ಕೋಲ್ಕತಾದಲ್ಲಿ ನಡೆಯ ರಾಷ್ಟ್ರೀಯ ಶಿಬಿರಕ್ಕೆ ಕಳುಹಿಸಿಕೊಡಲಾಗುವುದು” ಎಂದರು ಶ್ಲಾಘಿಸಿದರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಸಿ. ರವೀಂದ್ರ ಮಾತನಾಡಿ “ದೀಪವು ಸ್ವಯಂ ಪ್ರೇರಿತ ಸೇವೆ, ತ್ಯಾಗ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಮಾರ್ಗದರ್ಶನವನ್ನು ಸೂಚಿಸುತ್ತದೆ. ಇದನ್ನು ಸ್ವಯಂ ಸೇವಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಸಹಾಯಕ ಪ್ರಾಧ್ಯಾಪಕರಾದ ಆರ್ ಕೋಟೋಜಿರಾವ್ ಮಾತನಾಡಿ “ಸಾಂಸ್ಕೃತಿಕ ಹಾಗೂ ಬೌದ್ಧಿಕ ದೀಪೋತ್ಸವವು ಸೇವಾ ಮನೋಭಾವವನ್ನು ಜಾಗೃತಗೊಳಿಸುತ್ತದೆ” ಎಂದು ಹೇಳಿದರು.
ವೇದಿಕೆಯಲ್ಲಿ ಮುದ್ದನಹಳ್ಳಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ, ಪ್ರಶಾಂತ ಕುಮಾರ್, ಅಣ್ಣಪ್ಪ, ಮಂಜಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮಾಧಿಕಾರಿ ಅಭಿಷೇಕ್, ಉಪನ್ಯಾಸಕರಾದ ಪ್ರಕಾಶ್ ಉಪಾಧ್ಯಾಯ, ಶ್ರೀನಿವಾಸ್, ಹೇಮಂತ್, ದೀಪಾಶ್ರೀ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ, ವಿನಾಯಕ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ವಾಗ್ದೇವಿ ಸ್ವಾಗತಿಸಿ, ಸಹ ಕಾರ್ಯಕ್ರಮಾಧಿಕಾರಿ ಬಾಲಾಜಿ ನಿರೂಪಿಸಿದರು. ಸ್ವಯಂ ಸೇವಕರು ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















